ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳ ಮಾಡುವ ಸಾಧ್ಯತೆ ಇದೆ. 48 ಲಕ್ಷ ನೌಕರರಿಗೆ ಸರ್ಕಾರದ ಈ ನಿರ್ಧಾರದಿಂದ ಅನುಕೂಲವಾಗಲಿದೆ.
ತುಟ್ಟಿಭತ್ಯೆ ಹೆಚ್ಚಳಕ್ಕೆ ಸರ್ಕಾರ ಕ್ರಮಕೈಗೊಂಡಿದೆ. ಕೈಗಾರಿಕೆ ಕಾರ್ಮಿಕರ ಗ್ರಾಹಕ ದರ ಸೂಚ್ಯಂಕದ ಮೂಲ ವರ್ಷವನ್ನು 2001ರ ಬದಲಿಗೆ 2016 ಆಗಿ ಬದಲಾಯಿಸಲು ಸರ್ಕಾರ ಚಿಂತನೆ ನಡೆಸಿದ್ದು ತುಟ್ಟಿಭತ್ಯೆ ಹೆಚ್ಚಳವಾಗಿ ವೇತನದಲ್ಲಿ ಏರಿಕೆಯಾಗಲಿದೆ.
ಕಳೆದ 15 ವರ್ಷಗಳ ಅವಧಿಯಲ್ಲಿ ಗ್ರಾಹಕರ ದರ ಸೂಚ್ಯಂಕದಲ್ಲಿ ಸಾಕಷ್ಟು ಏರಿಕೆಯಾಗಿದ್ದು, ಇದಕ್ಕೆ ಅನುಗುಣವಾಗಿ ಡಿಎ ಏರಿಕೆ ಮಾಡಲಾಗುತ್ತದೆ. ಕೊರೋನಾ ಲಾಕ್ಡೌನ್ ಕಾರಣದಿಂದ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ ಮುಂದೂಡಿಕೆಯಾಗಿತ್ತು.
ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರು ಶೇಕಡ 17ರಷ್ಟು ತುಟ್ಟಿಭತ್ಯೆ ಪಡೆಯುವ ಅರ್ಹತೆ ಹೊಂದಿದ್ದು ಇತ್ತೀಚೆಗೆ ಕೇಂದ್ರ ಸರ್ಕಾರ ಹಬ್ಬದ ಉಡುಗೊರೆಯಾಗಿ ಹತ್ತು ಸಾವಿರ ರೂಪಾಯಿ ಮುಂಗಡ ಮತ್ತು ಎಲ್ಟಿಸಿ ವೋಚರ್ ನೀಡಲು ಮುಂದಾಗಿದೆ.