ನವದೆಹಲಿ: ಮೃತರ ಆತ್ಮಕ್ಕೆ ಶಾಂತಿ ಕೋರಿ ಶ್ರಾದ್ಧ ಕರ್ಮಗಳನ್ನು ಅವರ ಕುಟುಂಬದವರು ಮಾಡುವ ಪದ್ಧತಿ ಹಿಂದು ಧರ್ಮದಲ್ಲಿದೆ. ಅದರೊಟ್ಟಿಗೆ ಪತ್ರಿಕೆಗಳಲ್ಲಿ ಅವರ ಫೋಟೋ ಹಾಕಿ ಪುಣ್ಯ ಸ್ಮರಣೆಯ ಜಾಹೀರಾತು ನೀಡಿ ಅವರನ್ನು ನೆನೆಸಿಕೊಳ್ಳುವವರೂ ಇದ್ದಾರೆ. ಹಾಗೆ ಇತ್ತೀಚೆಗೆ ಆಂಗ್ಲ ಪತ್ರಿಕೆಯೊಂದರಲ್ಲಿ ಪ್ರಕಟವಾದ ಪುಣ್ಯ ಸ್ಮರಣೆ ಜಾಹೀರಾತು ಕುತೂಹಲ ಮೂಡಿಸಿದೆ.
2014 ರ ಡಿಸೆಂಬರ್ ನಲ್ಲಿ ಮೃತರಾದ ಸುರೇಂದ್ರ ಕೆ. ಗುಪ್ತಾ ಅವರ 6 ನೇ ಪುಣ್ಯಸ್ಮರಣೆಯ ದಿನ ಅವರ ಪತ್ನಿ ಹಾಗೂ ಮಕ್ಕಳು ಎಂಬ ಹೆಸರಿನಲ್ಲಿ ಎರಡು ಪ್ರತ್ಯೇಕ ಜಾಹೀರಾತುಗಳು ಒಂದೇ ಪತ್ರಿಕೆಯಲ್ಲಿ ಅಕ್ಕಪಕ್ಕದಲ್ಲೇ ಪ್ರಕಟವಾಗಿವೆ. ಅಚ್ಚರಿಯ ಸಂಗತಿ ಎಂದರೆ ಸುರೇಂದ್ರ ಅವರ ಫೋಟೋ ಹಾಗೂ ವಿವರ ಒಂದೇ ಆಗಿದ್ದರೂ ದುಃಖತಪ್ತ ಪತ್ನಿ ಹಾಗೂ ಮಕ್ಕಳ ಹೆಸರು ಮಾತ್ರ ಬೇರೆಯೇ ಇದೆ..!!
ಸುರೇಂದ್ರ ಅವರು ತಮ್ಮ ಜೀವಿತಾವಧಿಯಲ್ಲಿ ತುಂಬ ಕಲರ್ ಫುಲ್ ಜೀವನ ನಡೆಸಿದ್ದರು. ಎರಡು ಕುಟುಂಬಗಳನ್ನು ಮೆಂಟೇನ್ ಮಾಡಿರಬಹುದು. ಎಂದು ನೆಟ್ಟಿಗರು ವಿಶ್ಲೇಷಿಸಿದ್ದಾರೆ. ಎರಡೂ ಕುಟುಂಬಗಳಿಗೆ ಈ ಸತ್ಯ ಮೊದಲಿನಿಂದಲೇ ಗೊತ್ತಿತ್ತೇ..? ಅಥವಾ 6 ವರ್ಷದ ನಂತರ ಜಾಹೀರಾತು ಒಟ್ಟಿಗೇ ಪ್ರಕಟವಾದಾಗ ಗೊತ್ತಾಯಿತೆ ಎಂಬ ವಿಷಯ ಮಾತ್ರ ಯಾರಿಗೂ ತಿಳಿದಿಲ್ಲ. ಅದನ್ನು ಪರ ಲೋಕದಲ್ಲಿರುವ ಸುರೇಂದ್ರ ಅವರೇ ಹೇಳಬೇಕು.