alex Certify ಮಗಳ ಹುಟ್ಟುಹಬ್ಬಕ್ಕೆ ಅಪ್ಪ ಕಳಿಸಿದ ಸಂದೇಶ ʼವೈರಲ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳ ಹುಟ್ಟುಹಬ್ಬಕ್ಕೆ ಅಪ್ಪ ಕಳಿಸಿದ ಸಂದೇಶ ʼವೈರಲ್ʼ

Cry over Biryani, Not People': Father's Birthday Text to Daughter is All That You Need to Read

ಮುದ್ದಿನ ಮಗಳ ಹುಟ್ಟುಹಬ್ಬಕ್ಕೆ ಅಪ್ಪ ಕಳಿಸುವ ಸಂದೇಶವೆಂದರೆ ಅದು ಭಾವಪೂರ್ಣವಾಗಿರುತ್ತದೆ. ಇತ್ತೀಚೆಗೆ ಅಂಥದ್ದೇ ಒಂದು ವಾಟ್ಸಾಪ್ ಸಂದೇಶದ ಸ್ಕ್ರೀನ್‌ ಶಾಟ್ ‌ಅನ್ನು ರೂಪಶ್ರೀ ಎಂಬಾಕೆ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಮಗಳ 21ನೇ ಹುಟ್ಟುಹಬ್ಬಕ್ಕೆ ಶುಭ ಹಾರೈಸಿರುವ ಅಪ್ಪ, “ಹುಟ್ಟುಹಬ್ಬದ ಶುಭಾಶಯ ಮಗಳೇ ಮನು. ನಾನು ಇಂದು ಬೆಳಿಗ್ಗೆ ನೀನು ಅಳುವುದನ್ನು ಕಂಡೆ. ನಿನ್ನನ್ನು ಪಡೆಯಲು ಯೋಗ್ಯರಲ್ಲದ ಜನರಿಗಾಗಿ ಅಳುವುದನ್ನು ಬಿಡು ಎಂದು ಹೇಳಲು ಇಚ್ಛಿಸುತ್ತೇನೆ. ನಿನಗೀಗ 21 ವರ್ಷ ವಯಸ್ಸಾಗಿದ್ದು, ನಿನ್ನ ಮೌಲ್ಯ ಏನೆಂದು ನಿನಗೆ ಅರಿವಾಗಬೇಕು. ಜನರು ಬರುತ್ತಾರೆ ಹೋಗುತ್ತಾರೆ, ನೀನು ಅದನ್ನು ಬದಲಿಸಲು ಸಾಧ್ಯವಿಲ್ಲ. ಹಾಗಾಗಿ, ನಿನಗೆ ನಿನ್ನ ಮೌಲ್ಯ ಏನೆಂದು ತಿಳಿದಿದ್ದು, ನಿನಗೆ ನೀನು ಮೊದಲ ಆದ್ಯತೆ ಕೊಟ್ಟುಕೊಳ್ಳಬೇಕು” ಎಂದು ಹೇಳಿದ್ದಾರೆ.

ಇದೇ ವೇಳೆ, ಜನರಿಗೆ ಕಣ್ಣೀರು ಹಾಕುವ ಬದಲು ಬಿರಿಯಾನಿಗೆ ಕಣ್ಣೀರು ಸುರಿಸುವುದು ಉತ್ತಮ ಎಂದಿರುವ ಈ ತಂದೆ, “ಆದರೆ ನೀನು ನಿನ್ನ ಪಥ್ಯದಲ್ಲಿ ಬದಲಾವಣೆ ತಂದುಕೊಳ್ಳಬೇಕು. ನೀನು ದಿನೇ ದಿನೇ ಮರಿ ಆನೆಯಾಗುತ್ತಿರುವೆ” ಎಂದು ಎಚ್ಚರಿಕೆಯನ್ನು ಸಹ ನೀಡಿದ್ದಾರೆ. ಮುಂದುವರೆದು, ತನ್ನ ಯಾವುದೇ ರೀತಿಯ ಕಿರುಕುಳವನ್ನು ಸಹಿಸಿಕೊಳ್ಳದಿರಲು ಮಗಳಿಗೆ ಸೂಚಿಸಿರುವ ಪ್ರೀತಿಯ ಅಪ್ಪ, “ನಿನಗೆ ಕಿರುಕುಳು ಕೊಡಲು ಬರುವ ಯಾರೇ ಆದರೂ ಆತನ ಮೂಳೆ ಮುರಿದು ಎರಡು ಮಾಡಿ ನಮ್ಮ ಆಸ್ಪತ್ರೆಗೆ ತೆಗೆದುಕೊಂಡು ಬರಬೇಕು” ಎಂದು ತಿಳಿಸಿದ್ದಾರೆ.

https://twitter.com/jstalittleextra/status/1305929319550574592?ref_src=twsrc%5Etfw%7Ctwcamp%5Etweetembed%7Ctwterm%5E1305929319550574592%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fcry-over-biryani-not-people-fathers-birthday-text-to-daughter-is-all-that-you-need-to-read-2881247.html

https://twitter.com/Jayu_Heartwork/status/1306077784406503424?ref_src=twsrc%5Etfw%7Ctwcamp%5Etweetembed%7Ctwterm%5E1306077784406503424%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fcry-over-biryani-not-people-fathers-birthday-text-to-daughter-is-all-that-you-need-to-read-2881247.html

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...