ಕಾಗೆಯನ್ನು ಅಪಶಕುನದ ಪಕ್ಷಿ ಎಂದೇ ಪರಿಗಣಿಸುವುದುಂಟು. ಆದರೆ, ಶುಚಿತ್ವ ಕಾಪಾಡುವಲ್ಲಿ ಅದರ ಪಾತ್ರವೂ ಇದೆ. ರೈತ ಮಿತ್ರ ಕೂಡ ಹೌದು.
ಕಸದ ಬುಟ್ಟಿಯೊಂದರಿಂದ ಪ್ಲಾಸ್ಟಿಕ್ ಬಾಟಲ್ ಗಳನ್ನು ಹೆಕ್ಕಿ ತೆಗೆಯುತ್ತಿರುವ ಕಾಗೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅರಣ್ಯಾಧಿಕಾರಿ ಸುಶಾಂತಾ ನಂದ ಎಂಬುವರು ಈ ವಿಡಿಯೋ ಶೇರ್ ಮಾಡಿದ್ದು, ಕಾಗೆಯಿಂದ ಸಾಧ್ಯವಾಗುತ್ತಿರುವುದು ಮನುಷ್ಯರಿಂದಲೂ ಸಾಧ್ಯ ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಸುಮಾರು 11 ಸೆಕೆಂಡ್ ಇರುವ ವಿಡಿಯೋದಲ್ಲಿ ಮನುಷ್ಯರಿಗೆ ಕಾಗೆಯೇ ಶುಚಿತ್ವ ಪಾಠ ಕಲಿಸಿಕೊಡುತ್ತಿರುವಂತಿದೆ. ಸಾವಿರಕ್ಕೂ ಅಧಿಕ ಮಂದಿ ಮೆಚ್ಚಿಕೊಂಡಿದ್ದು, 16 ಸಾವಿರಕ್ಕೂ ಹೆಚ್ಚು ಜನರು ವಿಡಿಯೋ ವೀಕ್ಷಿಸಿದ್ದಾರೆ.