ಅದೃಷ್ಟ ಒಂದು ಚೆನ್ನಾಗಿತ್ತು ಅಂದ್ರೆ ಯಾರ್ ಜೀವನ ಬೇಕಿದ್ರೂ ರಾತ್ರಿ ಬೆಳಗಾಗೋದ್ರಲ್ಲಿ ಬದಲಾಗಿಬಿಡಬಹುದು. ಪಂಜಾಬ್ನ ಮೋಗಾದ ನಿವಾಸಿಯಾದ ಆಶಾರಾಣಿ ಎಂಬವರ ಜೀವನದಲ್ಲೂ ಈ ಮಾತು ನಿಜವಾಗಿದೆ.
ಪಂಜಾಬ್ ರಾಜ್ಯ ಡಿಯರ್ 100 ಮಾಸಿಕ ಲಾಟರಿಯಲ್ಲಿ 100 ರೂಪಾಯಿ ಕೊಟ್ಟು ಟಿಕೆಟ್ ಖರೀದಿಸಿದ್ದ ಆಶಾರಾಣಿ ಬರೋಬ್ಬರಿ 1 ಕೋಟಿ ರೂಪಾಯಿ ಜಾಕ್ಪಾಟ್ ಪಡೆದಿದ್ದಾರೆ.
ಲಾಟರಿ ಗೆದ್ದ ಸಂಭ್ರಮವನ್ನ ಹೊರಹಾಕಿದ 61 ವರ್ಷದ ಆಶಾ ರಾಣಿ: ಒಂದಲ್ಲ ಒಂದು ನಾನು ಕೋಟ್ಯಾಧಿಪತಿಯಾಗಬಲ್ಲೆ ಅನ್ನೋದನ್ನ ನಾನು ಕನಸಿನಲ್ಲಿಯೂ ಊಹಿಸಿರಲಿಲ್ಲ. ಇದೊಂತರ ನನ್ನ ಹಾಗೂ ನನ್ನ ಕುಟುಂಬಕ್ಕೆ ಕನಸು ನನಸುಗೊಂಡ ಕ್ಷಣವಾಗಿದೆ ಎಂದು ಹೇಳಿದ್ದಾರೆ.
ಇನ್ನು ಈ ಹಣದಲ್ಲಿ ಆಶಾರಾಣಿ ಹೊಸ ಮನೆಯನ್ನ ಕಟ್ಟಿಸುವ ಇರಾದೆ ಹೊಂದಿದ್ದಾರೆ. ಗುಜರಿ ವ್ಯಾಪಾರಿಯ ಪತ್ನಿ ಆಗಿರುವ ಆಶಾರಾಣಿ ಮನೆ ತುಂಬಾನೇ ಚಿಕ್ಕದು. ಹೀಗಾಗಿ ಹೊಸ ಮನೆ ಕಟ್ಟಿಸೋದು ಹಾಗೂ ಆರ್ಥಿಕ ಸಮಸ್ಯೆಗಳನ್ನ ನೀಗಿಸಿಕೊಳ್ಳೋದು ಮತ್ತು ಉದ್ಯಮವನ್ನ ಸುಧಾರಿಸಬೇಕು ಎಂದು ಆಶಾ ರಾಣಿ ಹೇಳಿದ್ದಾರೆ. ಈಕೆಯ ಪತಿ ಬಾಘಪುರಾಣದಲ್ಲಿ ಗುಜರಿ ಅಂಗಡಿ ಹೊಂದಿದ್ದು, ಈಕೆಯ ಇಬ್ಬರು ಮಕ್ಕಳು ಇಲ್ಲೇ ಕೆಲಸ ಮಾಡುತ್ತಾರಂತೆ.