ಕಾಸರಗೋಡು ಜಿಲ್ಲೆಯ ಕುಂಬಳೆ ಗ್ರಾಮದ ಪುರಾಣ ಪ್ರಸಿದ್ಧ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ದೇವರ ಮೊಸಳೆ ಎಂದೇ ಖ್ಯಾತಿ ಪಡೆದಿರುವ ಬಬಿಯಾ ಗರ್ಭಗುಡಿಯಲ್ಲಿ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದೆ.
ನದಿಯ ಮಧ್ಯಭಾಗದಲ್ಲಿ ಅನಂತ ಪದ್ಮನಾಭ ದೇವಸ್ಥಾನವಿದ್ದು ಬಬಿಯಾ ಹೆಸರಿನ ಮೊಸಳೆ ಅದೇ ನದಿಯಲ್ಲಿ ಹಲವಾರು ವರ್ಷಗಳಿಂದ ವಾಸವಾಗಿದೆ. ಆದರೆ ಇದೇ ಮೊದಲ ಬಾರಿಗೆ ದೇಗುಲದ ಗರ್ಭಗುಡಿಗೆ ಮೊಸಳೆ ಬಂದಿದೆ ಅಂತಾ ಅರ್ಚಕರು ಅಭಿಪ್ರಾಯಪಟ್ಟಿದ್ದಾರೆ.
ಬಬಿಯಾನನ್ನ ದೇವರ ಮೊಸಳೆ ಎಂದೇ ಸ್ಥಳೀಯರು ನಂಬಿದ್ದಾರೆ. ಈ ದೇವಸ್ಥಾನದಲ್ಲಿ ದೇವರಿಗೆ ನೈವೇದ್ಯ ನೀಡೋದ್ರ ಜೊತೆಗೆ ಬಬಿಯಾಗೂ ನಿತ್ಯ ನೇವೈದ್ಯ ಸಮರ್ಪಣೆ ಮಾಡಲಾಗುತ್ತೆ.