ಮಹೀಂದ್ರಾ ಉದ್ಯಮ ಸಮೂಹದ ಚೇರ್ಮನ್ ಆನಂದ್ ಮಹೀಂದ್ರಾ ಯಾವಾಗಲೂ ಜನಸಾಮಾನ್ಯರ ಜೀವನದೊದಿಗೆ ಬಹಳ ಕನೆಕ್ಟ್ ಆಗಿರುವವರಂತೆ ಕಾಣುತ್ತಾರೆ. ಅವರು ತಮ್ಮ ಟ್ವಿಟರ್ ಪ್ರೊಫೈಲ್‌ನಲ್ಲಿ ಬಹಳ ಆಸಕ್ತಿದಾಯಕ ಪೋಸ್ಟ್‌ಗಳನ್ನು ಹಾಕುತ್ತಲೇ ಬರುತ್ತಿದ್ದಾರೆ.
ಇಂಥದ್ದೇ ಮತ್ತೊಂದು ಪೋಸ್ಟ್‌ನಲ್ಲಿ, ದ್ವಿಚಕ್ರ ವಾಹನದ ಹಿಂಬದಿ ಚಕ್ರವನ್ನು ಬಳಸಿಕೊಂಡು ಮೆಕ್ಕೆ ಜೋಳದ ಕಾಳುಗಳನ್ನು ಬಿಡಿಸುವ ವಿಡಿಯೋವೊಂದನ್ನು ಆನಂದ್ ಮಹೀಂದ್ರಾ ಶೇರ್ ಮಾಡಿಕೊಂಡಿದ್ದಾರೆ.
“ಕೃಷಿಕ ಸಮುದಾಯದ ಮಂದಿ ತಮ್ಮ ಬೈಕ್‌ಗಳು & ಟ್ರಾಕ್ಟರ್‌ಗಳನ್ನು ಬಹೋಪಯೋಗಿ ಯಂತ್ರಗಳನ್ನಾಗಿ ಬಳಸಿಕೊಳ್ಳುತ್ತಾರೆ ಎಂದು ತೋರುವ ಕ್ಲಿಪ್‌ಗಳನ್ನು ನೋಡುತ್ತಲೇ ಇರುತ್ತೇನೆ. ವಾಹನವನ್ನು ಹೀಗೂ ಬಳಸಬಹುದೆಂದು ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಕಾಂಟಿನೆಂಟಲ್ ಟೈರ್‌ಗಳು ತಮ್ಮ ವಿಶೇಷ ಬ್ರಾಂಡ್ ಅನ್ನು ಕಾರ್ನ್‌ಟಿನೆಂಟಲ್ ಎಂದು ಮರುನಾಮಕರಣ ಮಾಡಬೇಕಿತ್ತು” ಎಂದು ಮಹೀಂದ್ರಾ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.
ಇದಕ್ಕೂ ಮುನ್ನ, ಟ್ರಾಕ್ಟರ್ ಬಳಸಿಕೊಂಡು ಹಸುಗಳಿಂದ ಹಾಲು ಕರೆಯುತ್ತಿದ್ದ ಮಹಾರಾಷ್ಟ್ರದ ರೈತರೊಬ್ಬರ ಐಡಿಯಾವನ್ನು ಈ ಹಿಂದೆ ಆನಂದ್ ಮಹೀಂದ್ರಾ ಶೇರ್ ಮಾಡಿಕೊಂಡಿದ್ದರು.