ನವದೆಹಲಿ: ದೇಶದಲ್ಲಿ ಕೊರೋನಾ ಲಸಿಕೆ ಪಡೆದುಕೊಳ್ಳಲು ಆರೋಗ್ಯ ಸೇತು ಇಲ್ಲವೇ ಕೋವಿನ್ ಆಪ್ ನಲ್ಲಿ ನೋಂದಾಯಿಸಬೇಕಿದೆ. ಇಂಗ್ಲಿಷ್ ಜೊತೆಗೆ ಹಿಂದಿಯಲ್ಲಿಯೂ ಕೋವಿನ್ ಪೋರ್ಟಲ್ ಲಭ್ಯವಿರಲಿದ್ದು, ಮುಂದಿನ ವಾರದಿಂದ ಇತರೆ ಪ್ರಾದೇಶಿಕ ಭಾಷೆಗಳಲ್ಲಿಯೂ ಲಭ್ಯವಿರಲಿದೆ.
ಮುಂದಿನ ವಾರ ಹಿಂದಿ ಮತ್ತು 14 ಪ್ರಾದೇಶಿಕ ಭಾಷೆಗಳಲ್ಲಿ ಕೋವಿನ್ ಪೋರ್ಟಲ್ ಲಭ್ಯವಾಗಲಿದೆ. ಕೊರೊನಾ ಸೋಂಕು ತಡೆಗೆ ಲಸಿಕೆ ಹಾಕಿಸಿಕೊಳ್ಳಲು ಆಪ್ ನಲ್ಲಿ ನೋಂದಾಯಿಸಿಕೊಳ್ಳುವವರಿಗೆ ಸುಲಭವಾಗಲಿದೆ. ಸ್ಥಳೀಯ ಭಾಷೆಗಳಲ್ಲಿಯೇ ಆಪ್ ನಲ್ಲಿ ಮಾಹಿತಿ ಸಿಗುವುದರಿಂದ ಜನ ಸಾಮಾನ್ಯರು ಕೂಡ ಸುಲಭವಾಗಿ ನೋಂದಾಯಿಸಿಕೊಳ್ಳಬಹುದಾಗಿದೆ.
COVID-19 ನ ರೂಪಾಂತರಗಳನ್ನು ಮೇಲ್ವಿಚಾರಣೆ ಮಾಡಲು ಇನ್ನೂ 17 ಪ್ರಯೋಗಾಲಯಗಳನ್ನು INSACOG ನೆಟ್‌ವರ್ಕ್‌ಗೆ ಸೇರಿಸಲಾಗುವುದು ಎಂದು ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.
ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಕೋವಿಡ್-19 ಕುರಿತು ಉನ್ನತ ಮಟ್ಟದ ಮಂತ್ರಿಗಳ 26 ನೇ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಗಿದೆ.