ಕೊರೊನಾ ಲಸಿಕೆಯನ್ನು ಕೊರೊನಾ ವೈರಸ್ ವಿರುದ್ಧದ ದೊಡ್ಡ ಅಸ್ತ್ರವೆಂದು ಪರಿಗಣಿಸಲಾಗಿದೆ. 18 ರಿಂದ 44 ವರ್ಷದೊಳಗಿನ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಪಡೆಯಲು ಜನರು ಕೋವಿನ್ ಪೋರ್ಟಲ್ನಿಂದ ಸ್ಲಾಟ್ಗಳನ್ನು ಕಾಯ್ದಿರಿಸಬೇಕಾಗಿದೆ. ಆದರೆ ಕಳೆದ ಕೆಲವು ದಿನಗಳಿಂದ ಕೋವಿನ್ ಪೋರ್ಟಲ್ನಲ್ಲಿ ನ್ಯೂನ್ಯತೆ ಕಾಣ್ತಿದೆ. 18 ವರ್ಷ ಮೇಲ್ಪಟ್ಟ ಜನರಿಗೆ ಲಸಿಕೆಯ ಎರಡನೇ ಡೋಸ್ ಕಾಣಿಸಲಾಗ್ತಿದೆ.
18 ವರ್ಷ ಮೇಲ್ಪಟ್ಟ ಜನರಿಗೆ ಲಸಿಕೆ ನೀಡುವ ಪ್ರಕ್ರಿಯೆ ಮೇ 1 ರಿಂದ ಪ್ರಾರಂಭವಾಗಿದೆ. ಕೋವಾಕ್ಸಿನ್ನ ಮೊದಲ ಡೋಸ್ ಪಡೆದ 4 ವಾರಗಳ ನಂತರ ಎರಡನೇ ಡೋಸ್ ನೀಡಲಾಗುವುದು. ಆದರೆ ಕೋವಿಶೀಲ್ಡ್ ಎರಡು ಡೋಸ್ ನಡುವಿನ ವ್ಯತ್ಯಾಸವು 12 ರಿಂದ 16 ವಾರಗಳು. 18 ರಿಂದ 44 ವರ್ಷದೊಳಗಿನ ಜನರಿಗೆ ವ್ಯಾಕ್ಸಿನೇಷನ್ ಪ್ರಾರಂಭವಾಗಿದೆ.
ಲಸಿಕೆ ಪಡೆಯಲು ಕೋವಿನ್ ಪೋರ್ಟಲ್ ನಲ್ಲಿ ಹೆಸರು ಕಾಯ್ದಿರಿಸಬೇಕು. ಆದ್ರೆ ಮೊದಲ ಡೋಸ್ ಬದಲು ಎರಡನೇ ಡೋಸ್ ಗೆ ಸಮಯ ನೀಡಲಾಗ್ತಿದೆ. ಇದು ಜನರಲ್ಲಿ ಗೊಂದಲ ಹೆಚ್ಚಿಸಿದೆ. ಇದ್ರಿಂದಾಗಿ ಜನರು ಅಪಾಯಿಂಟ್ಮೆಂಟ್ ಪಡೆಯಲು ಸತತ ಪ್ರಯತ್ನ ನಡೆಸುವಂತಾಗಿದೆ.