ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಭಾರತದಲ್ಲಿ ಮತ್ತೊಂದು ಕೋವಿಡ್ ಲಸಿಕೆ ಕೊವೊವ್ಯಾಕ್ಸ್ನ ಪ್ರಾಯೋಗಿಕ ಪರೀಕ್ಷೆ ಆರಂಭಿಸಿರೋದಾಗಿ ಹೇಳಿದ್ದಾರೆ. ಅಲ್ಲದೇ ಲಸಿಕೆಯನ್ನ ಸೆಪ್ಟೆಂಬರ್ ತಿಂಗಳಲ್ಲಿ ಲಾಂಚ್ ಮಾಡುವ ಬಗ್ಗೆ ಕಂಪನಿ ಚಿಂತಿಸಿದೆ.
ಕಳೆದ ವರ್ಷ ಆಗಸ್ಟ್ನಲ್ಲಿ ಅಮೆರಿಕದ ಲಸಿಕೆ ತಯಾರಕ ಕಂಪನಿ ನೊವಾವ್ಯಾಕ್ಸ್ ಸೀರಂ ಇನ್ಸ್ಟಿಟ್ಯೂಟ್ ಜೊತೆ ಒಪ್ಪಂದ ಮಾಡಿಕೊಂಡು ಈ ಲಸಿಕೆಯನ್ನ ತಯಾರಿಸಿದೆ.
ಕೊವೊವ್ಯಾಕ್ಸ್ನ ಪ್ರಯೋಗ ಕೊನೆಗೂ ಭಾರತದಲ್ಲಿ ಆರಂಭವಾಗಿದೆ. ಈ ಲಸಿಕೆಯನ್ನ ಸೀರಂ ನೊವಾವ್ಯಾಕ್ಸ್ ಸಹಭಾಗಿತ್ವದಲ್ಲಿ ತಯಾರಿಸಿದೆ.
ಈ ಲಸಿಕೆಯು ಆಫ್ರಿಕಾ ಹಾಗೂ ಬ್ರಿಟನ್ನ ರೂಪಾಂತರಿ ವೈರಸ್ ವಿರುದ್ಧ ಪರೀಕ್ಷಿಸಲಾಗಿದ್ದು 89 ಪ್ರತಿಶತ ಪರಿಣಾಮಕಾರತ್ವವನ್ನ ತೋರಿಸಿದೆ. ಈ ಲಸಿಕೆಯು ಸೆಪ್ಟೆಂಬರ್ನಲ್ಲಿ ಲಾಂಚ್ ಆಗುತ್ತದೆ ಎಂಬ ನಂಬಿಕೆ ಇದೆ ಎಂದು ಪೂನಾವಾಲಾ ಟ್ವೀಟಾಯಿಸಿದ್ದಾರೆ.