ಕೊರೊನಾ ವೈರಸ್ನ್ನು ಹೋಗಲಾಡಿಸುವ ಸಲುವಾಗಿ ದೇಶದಲ್ಲಿ ಜನತೆಗೆ ಲಸಿಕಾ ಅಭಿಯಾನ ನಡೆಯುತ್ತಲೇ ಇದೆ. ಈ ನಡುವೆ ಕೊರೊನಾ ಸೋಂಕಿನ ವಿರುದ್ಧ ಕೋವಿಶೀಲ್ಡ್ ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.
ಜರ್ನಲ್ ಆಫ್ ಇನ್ಫೆಕ್ಷನ್ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಕೇರಳದ ಆರೋಗ್ಯ ಕಾರ್ಯಕರ್ತರ ಮೇಲೆ ಲಸಿಕೆಯ ಪ್ರಗತಿಯ ಬಗ್ಗೆ ಅಧ್ಯಯನವನ್ನ ನಡೆಸಲಾಗಿದೆ. ಈ ಅಧ್ಯಯನಕ್ಕೆ ನ್ಯಾಷನಲ್ ಹೆಲ್ತ್ ಮಿಷನ್ ಕೇರಳ ಹಾಗೂ ಕೌನ್ಸಿಲ್ ಆಫ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ ಸಹ ಸಾಥ್ ನೀಡಿವೆ.
4-6 ವಾರಗಳ ಅಂತರದಲ್ಲಿ ಲಸಿಕೆಯನ್ನ ಪಡೆದ ಆರು ಮಂದಿ ರೋಗಿಗಳಲ್ಲಿ 15 ದಿನಗಳ ಕಾಲ ಕೋವಿಡ್ ಲಕ್ಷಣಗಳು ಯಾವ ರೀತಿ ಇರಲಿದೆ ಅನ್ನೋದನ್ನ ಪರೀಕ್ಷೆ ಮಾಡಲಾಯ್ತು.
ಈ ಸಮೀಕ್ಷೆಯಲ್ಲಿ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ ಪಡೆದವರ ಮೇಲೆ ಲಸಿಕೆಯು ರೋಗ ಲಕ್ಷಣದ ಮೇಲೆ 63 ಪ್ರತಿಶತ ಪರಿಣಾಮ ಬೀರಿದೆ. ಸ್ವಲ್ಪ ಪ್ರಮಾಣದ ಜನರು ಮಾತ್ರ ಸೋಂಕಿಗೆ ಒಳಗಾಗಿದ್ದಾರೆ. ಲಸಿಕೆಯನ್ನ ಪಡೆದ ಆರು ಮಂದಿ ರೋಗಿಗಳಲ್ಲಿ ಒಬ್ಬರಿಗೂ ಸಹ ಗಂಭೀರ ಲಕ್ಷಣಗಳು ಕಂಡುಬಂದಿಲ್ಲ.
ಇದರಲ್ಲಿ ನಾಲ್ಕು ಮಂದಿ ರೋಗಿಗಳು B.1.1.7 ರೂಪಾಂತರಿ ಸೋಂಕಿಗೆ ಗುರಿಯಾಗಿದ್ದರು. ಈ ರೂಪಾಂತರಿಯ ವಿರುದ್ಧ ಕೋವಿಶೀಲ್ಡ್ ಪರಿಣಾಮಕಾರಿ ಫಲಿತಾಂಶವನ್ನೇ ತೋರಿಸಿದೆ.