ಗ್ರಾಮಸ್ಥರಿಗೆ ಮೊದಲ ಹಾಗೂ ಎರಡನೆ ಡೋಸ್ ಲಸಿಕೆಯ ವೇಳೆ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಅದಲುಬದಲಾದ ಘಟನೆ ಉತ್ತರದ ಪ್ರದೇಶದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ಸಿದ್ದಾರ್ಥನಗರ ಜಿಲ್ಲೆಯ ಸರಿಸುಮಾರು 20 ಮಂದಿ ಗ್ರಾಮಸ್ಥರಿಗೆ ಲಸಿಕೆ ಅದಲುಬದಲಾಗಿದೆ. ಆದರೆ ಯಾರಲ್ಲೂ ಅಡ್ಡಪರಿಣಾಮ ಇಲ್ಲಿಯವರೆಗೆ ಕಂಡು ಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚನೆ ನೀಡಲಾಗಿದೆ.
ಲಕ್ನೌದಿಂದ 270 ಕಿಲೋಮೀಟರ್ ದೂರದಲ್ಲಿರುವ ಹಳ್ಳಿಯೊಂದರ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಈ ಅವಾಂತರ ವರದಿಯಾಗಿದೆ. ಗ್ರಾಮಸ್ಥರಿಗೆ ಏಪ್ರಿಲ್ ಮೊದಲ ವಾರದಂದು ಕೋವಿಶೀಲ್ಡ್ ಲಸಿಕೆ ನೀಡಲಾಗಿತ್ತು. ಮೇ 14ರಂದು ಕೊವ್ಯಾಕ್ಸಿನ್ ಲಸಿಕೆಯನ್ನ ಎರಡನೆ ಡೋಸ್ ಆಗಿ ನೀಡಲಾಗಿದೆ.
ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ. ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತೆ ಎಂದು ಸಿದ್ದಾರ್ಥನಗರ ಚೀಫ್ ಮೆಡಿಕಲ್ ಆಫೀಸರ್ ಸಂದೀಪ್ ಚೌದರಿ ಹೇಳಿದ್ದಾರೆ.