ವಿಶ್ವದೆಲ್ಲೆಡೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವುದರಿಂದ, ಹಬ್ಬ ಹರಿದಿನಗಳೆಲ್ಲ ತಮ್ಮ ಎಂದಿನ ಶೈಲಿ ಬದಲಾಯಿಸಿಕೊಂಡಿವೆ. ಇದಕ್ಕೆ ರಾಖಿ ಹಬ್ಬವೂ ಹೊರತಲ್ಲ.
ಹೌದು, ಈ ಬಾರಿ ಕೊರೊನಾ ಮಹಾಮಾರಿ ಹೆಚ್ಚಾಗಿರುವುದರಿಂದ ರಾಖಿ ಹಬ್ಬವನ್ನು ವಿಶೇಷವಾಗಿ ಆಚರಿಸಲು ಲಕ್ನೋ ಜನರಲ್ ಪೋಸ್ಟ್ ಆಫೀಸ್ನಲ್ಲಿ ರಾಖಿ ಕಳುಹಿಸಲು ಬರುವ ಸಹೋದರಿಯರಿಗೆ ವಿಶೇಷ ಆಫರ್ ನೀಡಿದೆ. ಅದೇನೆಂದರೆ, ರಾಖಿಯ ಜತೆಗೆ ಮಾಸ್ಕ್, ಸ್ಯಾನಿಟೈಸರ್ ಹಾಗೂ ರೋಗ ನಿರೋಧಕ ಶಕ್ತಿ ವೃದ್ಧಿಸಲು ಆಯುರ್ವೇದ ಮಾತ್ರೆಯನ್ನು ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ.
ರಾಖಿಯೊಂದಿಗೆ ಈ ಎಲ್ಲ ವಸ್ತುಗಳನ್ನು ಕಳುಹಿಸುವ ಮೂಲಕ, ಜನರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ, ಕೊರೊನಾ ವಿರುದ್ಧದ ಹೋರಾಟದಲ್ಲಿ ಸಹಕಾರಿಯಾಗಲು ನಿರ್ಧರಿಸಿದೆ. ಇದರೊಂದಿಗೆ ರಾಖಿ ಕಳುಹಿಸಲು ವಿಶೇಷ ಎನ್ವಲಪ್, ಸ್ಟಾಂಪ್ಗಳನ್ನು ಬಳಸಲಾಗಿದೆ.