ಕೊರೊನಾ ಸ್ಪಲ್ಪಮಟ್ಟಿಗೆ ನಿಯಂತ್ರಣಕ್ಕೆ ಬಂದಿದ್ರೂ ಕೊರೊನಾ ಭಯ ಹಾಗೆಯೇ ಇದೆ.
ಕೊರೊನಾ ಲಸಿಕೆ ತಯಾರಿಕೆ, ವಿತರಣೆ ಕಾರ್ಯ ಜೋರಾಗಿ ನಡೆಯುತ್ತಿದೆ. ಕೊರೊನಾ ಲಸಿಕೆಗಳ ಉತ್ಪಾದನೆ ಮತ್ತು ಪೂರೈಕೆಗಾಗಿ ಭಾರತ ಸಂಪೂರ್ಣವಾಗಿ ಸಿದ್ಧವಾಗಿದೆ.
ಭಾರತದ ಲಸಿಕೆಗೆ ಬೇಡಿಕೆ ಹೆಚ್ಚಾಗ್ತಿದೆ. ಬ್ರೆಜಿಲ್, ಮೊರಾಕೊ, ಸೌದಿ ಅರೇಬಿಯಾ, ಮ್ಯಾನ್ಮಾರ್, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾದಂತಹ ದೇಶಗಳು ಅಧಿಕೃತವಾಗಿ ಭಾರತದಿಂದ ಲಸಿಕೆ ಕೋರಿವೆ.
ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಮೊದಲಿನಿಂದಲೂ ಮುಂದಿದೆ. ಜಾಗೃತಿ ಅಭಿಯಾನದ ಮೂಲಕ ಜನರನ್ನು ಎಚ್ಚರಿಸಿದೆ. ಕೊರೊನಾ ಲಸಿಕೆಗಾಗಿ ನಡೆಯುತ್ತಿರುವ ಚರ್ಚೆಯ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ, ಶನಿವಾರ ಭಾರತದ ಪಾತ್ರವನ್ನು ಪುನರುಚ್ಚರಿಸಿದ್ದಾರೆ. ಭಾರತದಲ್ಲಿ ಎರಡು ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ ಎಂದವರು ಹೇಳಿದ್ದಾರೆ. ಹಿಂದೆ ಭಾರತವು ಪಿಪಿಇ ಕಿಟ್‌ಗಳು, ಮಾಸ್ಕ್, ವೆಂಟಿಲೇಟರ್‌ಗಳು ಮತ್ತು ಪರೀಕ್ಷಾ ಕಿಟ್‌ಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಇಂದು ನಮ್ಮ ರಾಷ್ಟ್ರವು ಸ್ವಾವಲಂಬಿಯಾಗಿದೆ ಎಂದು ಪ್ರಧಾನಿ ಹೇಳಿದ್ದರು.
ವರದಿಗಳ ಪ್ರಕಾರ, ನೇಪಾಳವು ಭಾರತದಿಂದ 12 ಮಿಲಿಯನ್ ಕೊರೊನಾ ಲಸಿಕೆ ಪ್ರಮಾಣವನ್ನು ಕೋರಿದೆ. ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ 1 ಮಿಲಿಯನ್ ಡೋಸ್ ಲಸಿಕೆಯನ್ನು ತಯಾರಿಸಲು ಭೂತಾನ್ ಒತ್ತಾಯಿಸಿದೆ. ಮ್ಯಾನ್ಮಾರ್ ಸೀರಮ್‌ನೊಂದಿಗೆ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದೆ. ಮತ್ತೊಂದೆಡೆ, ಬಾಂಗ್ಲಾದೇಶವು ಕೋವಿಶೀಲ್ಡ್ 30 ಮಿಲಿಯನ್ ಡೋಸ್ ಗಳನ್ನು ಕೋರಿದೆ.