ಕೊರೊನಾ ವೈರಸ್ ಲಸಿಕೆ ಪಡೆದ ಮಂದಿಗೆ ಮೇಘಾಲಯದ ಟ್ರಾವೆಲಿಂಗ್ ಕಂಪನಿಯೊಂದು ಅದ್ದೂರಿ ಟ್ರಾವೆಲ್ ಪ್ಯಾಕೇಜ್‌ಗಳನ್ನು ಕೊಡಮಾಡುತ್ತಿದೆ.
ಮೇಘ್ ಹೆಸರಿನ ಈ ಟ್ರಾವೆಲ್ ಕಂಪನಿ ’ವ್ಯಾಕ್ಸ್ ಟ್ರಿಪ್’ ಎಂಬ ಹೆಸರಿನಲ್ಲಿ ಈ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದು, ಆರು ದಿನಗಳು – ಐದು ರಾತ್ರಿಗಳ ಈ ಟ್ರಿಪ್‌ಗೆ 19,495 ರೂ.ಗಳನ್ನು ಚಾರ್ಜ್ ಮಾಡುತ್ತಿದೆ. ಜುಲೈ -ಸೆಪ್ಟೆಂಬರ್‌ನಲ್ಲಿ ನಳನಳಿಸುವ ಮೇಘಾಲಯದ ಹಚ್ಚಹಸಿರಿನ ಸೌಂದರ್ಯವನ್ನು ನಿಮ್ಮ ಕಣ್ಣಿಗೆ ಉಣಬಡಿಸುವ ಮಾತನ್ನು ಈ ಟ್ರಿಪ್ ಕೊಟ್ಟಿದೆ.
ಪೋಸ್ಟ್ ಆಫೀಸ್ ಗ್ರಾಹಕರಿಗೆ ಇಲ್ಲಿದೆ ಗುಡ್ ನ್ಯೂಸ್
ಟ್ರಿಪ್‌ನ ಮೊದಲ ದಿನ ಪ್ರಯಾಣಿಕರು ಗೌಹಾಟಿ ವಿಮಾನ ನಿಲ್ದಾಣ ತಲುಪಲಿದ್ದು, ಅಲ್ಲಿಂದ ಪ್ರವಾಸದ ವ್ಯವಸ್ಥಾಪಕರು ಚಿರಾಪುಂಜಿಗೆ ಕರೆದೊಯ್ಯಲಿದ್ದಾರೆ. ಅಲ್ಲಿಂದ ಈಶಾನ್ಯದ ರುದ್ರರಮಣೀಯ ತಾಣಗಳಾದ ಉಮಿಯಾಮ್ ಕೆರೆ, ಮಾವ್ಡಾಕ್ ಡಿಂಪೆಪ್ ವ್ಯೂ ಪಾಯಿಂಟ್ ಸೇರಿದಂತೆ ಅನೇಕ ಜಾಗಗಳನ್ನು ನೋಡಬಹುದಾಗಿದೆ.
ಎರಡನೇ ದಿನ ನೋಖಾಲಿಖಾಯ್, ಸೆವೆನ್ ಸಿಸ್ಟರ್ಸ್, ದಾಂಯಿಂತ್ಲೆನ್ ಜಲಪಾತಗಳು ಹಾಗೂ ಅರ್ವಾ ಲುಮಶಿನಾ ಗುಹೆಗಳನ್ನು ಪ್ರಯಾಣಿಕರು ನೋಡಬಹುದಾಗಿದೆ. ಮುಂದಿನ ದಿನಗಳಲ್ಲಿ; ಮಾವ್ಲಿನ್ನಾಂಗ್ ಗ್ರಾಮ, ಮಾವ್‌ಪ್ಲಾಂಗ್ ಅರಣ್ಯದ ಜೀವಂತ ಬೇರು ಸೇತುವೆ ಹಾಗೂ ಗೌಹಾಟಿಯ ಕಾಮಾಕ್ಯ ದೇವಸ್ಥಾನ ತೋರಿಸಲಾಗುವುದು.
70 ವಯಸ್ಸು ದಾಟಿದ ಹಿರಿಯ ನಾಗರಿಕರು ಈ ಪ್ರವಾಸಕ್ಕೆ ಬರಬೇಕಾದಲ್ಲಿ ಕುಟುಂಬದ ಸದಸ್ಯರನ್ನು ಕರೆದುಕೊಂಡು ಬರಬೇಕು. ಬುಕಿಂಗ್ ಮಾಡುವ ಮುನ್ನ ತಮ್ಮ ಫಿಟ್ನೆಸ್ ಕುರಿತಂತೆ ಪ್ರಮಾಣ ಪತ್ರದ ಖಾತ್ರಿಯನ್ನು ಸಹ ಕೊಡಬೇಕಾಗುತ್ತದೆ.