ಕೊರೊನಾ ಸೋಂಕಿನ ಕಾರಣಕ್ಕೆ 6 ತಿಂಗಳಿಂದ ಬಂದ್ ಆಗಿದ್ದ ಶಾಲೆಗಳು ಮತ್ತೆ ಶುರುವಾಗ್ತಿವೆ. ಕೆಲ ರಾಜ್ಯಗಳಲ್ಲಿ ಈಗಾಗಲೇ 9ನೇ ತರಗತಿಯಿಂದ 12ನೇ ತರಗತಿಯವರೆಗೆ ಶಾಲೆ ಶುರುವಾಗಿದೆ. ಮತ್ತೆ ಕೆಲ ರಾಜ್ಯಗಳಲ್ಲಿ ಕೊರೊನಾ ಕಾರಣಕ್ಕೆ ಶಾಲೆಗಳು ಶುರುವಾಗಿಲ್ಲ. ಆದ್ರೆ ಆದಷ್ಟು ಬೇಗ ಶಾಲೆಗಳು ತೆರೆಯಲಿವೆ. ಮಕ್ಕಳನ್ನು ಶಾಲೆಗೆ ಕಳುಹಿಸುವ ಮೊದಲು ಪಾಲಕರು ಕೆಲವೊಂದು ವಿಷ್ಯವನ್ನು ಮಕ್ಕಳಿಗೆ ಕಲಿಸುವ ಅನಿವಾರ್ಯತೆಯಿದೆ.
ಮಕ್ಕಳಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ತಿಳಿಸಿ ಹೇಳಬೇಕು. ಶಾಲೆಗಳಲ್ಲಿ ಹಾಗೂ ಶಾಲಾ ಬಸ್ ನಲ್ಲಿ ಸಾಮಾಜಿಕ ಅಂತರಕ್ಕೆ ಮಹತ್ವ ನೀಡಲಾಗ್ತಿದೆ. ಮಕ್ಕಳಿಗೂ ಸಾಮಾಜಿಕ ಅಂತರದ ಬಗ್ಗೆ ಪಾಲಕರು ತಿಳಿಸಿದ್ರೆ ಶಾಲೆಗೆ ಹೋದ ಮೇಲೆ ಮಕ್ಕಳ ಸುರಕ್ಷತೆ ಬಗ್ಗೆ ಚಿಂತಿಸುವ ಅಗತ್ಯವಿರುವುದಿಲ್ಲ.
ಮಕ್ಕಳಿಗೆ ಕನಿಷ್ಠ 20 ಸೆಕೆಂಡುಗಳ ಕಾಲ ಸೋಪ್ ಮತ್ತು ನೀರಿನಿಂದ ಕೈಗಳನ್ನು ಚೆನ್ನಾಗಿ ತೊಳೆಯಲು ಅಭ್ಯಾಸ ಮಾಡಿ. ಶೇಕಡಾ 60 ರಷ್ಟು ಆಲ್ಕೋಹಾಲ್ ಹೊಂದಿರುವ ಹ್ಯಾಂಡ್ ಸ್ಯಾನಿಟೈಜರ್ ಬಳಸಲು ಅವರಿಗೆ ತಿಳಿಸಿ. ಸಿಸ್ಟಮ್, ಡೋರ್ ಹ್ಯಾಂಡಲ್, ಟ್ಯಾಪ್ ಹ್ಯಾಂಡಲ್ ಅನ್ನು ಸ್ಪರ್ಶಿಸಿದ ನಂತರ ಕೈ ತೊಳೆದುಕೊಳ್ಳುವಂತೆ ಸಲಹೆ ನೀಡಿ.
ಶಾಲೆಯಲ್ಲಿ, ಶಾಲಾ ಬಸ್ ನಲ್ಲಿ ಮಾಸ್ಕ್ ಧರಿಸುವಂತೆ ಮಕ್ಕಳಿಗೆ ತಿಳಿ ಹೇಳಿ. ಯಾವುದೇ ಕಾರಣಕ್ಕೂ ಮಾಸ್ಕ್ ತೆಗೆಯದಂತೆ ಹೇಳಿ. ಮಕ್ಕಳ ಸ್ಕೂಲ್ ಬ್ಯಾಗಿನಲ್ಲಿ ಒಂದು ಮಾಸ್ಕನ್ನು ಇಡಲು ಮರೆಯಬೇಡಿ.