alex Certify ಬಹಿರಂಗವಾಯ್ತು ಕೊರೊನಾ ಕುರಿತ ಮತ್ತೊಂದು ಬೆಚ್ಚಿ ಬೀಳಿಸುವ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಹಿರಂಗವಾಯ್ತು ಕೊರೊನಾ ಕುರಿತ ಮತ್ತೊಂದು ಬೆಚ್ಚಿ ಬೀಳಿಸುವ ಮಾಹಿತಿ

ನವದೆಹಲಿ: ಕೊರೋನಾ ಸೋಂಕು ಎರಡನೇ ಬಾರಿಗೆ ತಗುಲಿದವರಿಗೆ ಮೊದಲ ಸಲಕ್ಕಿಂತ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುವುದು ಅಧ್ಯಯನದಲ್ಲಿ ಗೊತ್ತಾಗಿದೆ.

ಸೌಮ್ಯ ರೋಗ ಲಕ್ಷಣಗಳೊಂದಿಗೆ ಕಾಯಿಲೆಯಿಂದ ಚೇತರಿಸಿಕೊಂಡ ವಾರಗಳ ನಂತರ ನಾಲ್ವರು ಆರೋಗ್ಯ ಕಾರ್ಯಕರ್ತರಿಗೆ ಕೊರೋನಾ ತೀವ್ರವಾಗಿ ಬಾಧಿಸಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತಾದ ಅಧ್ಯಯನದಲ್ಲಿ ಎರಡನೇ ಬಾರಿ ಸೋಂಕು ತಗುಲಿದ ವೇಳೆ ಸೌಮ್ಯ ರೋಗ ಲಕ್ಷಣಗಳಿದ್ದರೂ ಗಂಭೀರ ಪರಿಣಾಮವನ್ನು ಉಂಟು ಮಾಡಬಹುದು ಎಂದು ಹೇಳಲಾಗಿದೆ.

ಮುಂಬೈನ ಎರಡು ಆಸ್ಪತ್ರೆಗಳು, ದೆಹಲಿಯ ಇಂಟರ್ ನ್ಯಾಷನಲ್ ಸೆಂಟರ್ ಫಾರ್ ಜೆನೆಟಿಕ್ ಇಂಜಿನಿಯರಿಂಗ್ ಅಂಡ್ ಬಯೋ ಟೆಕ್ನಾಲಜಿ, CSIR – ಇನ್ಸ್ ಟಿಟ್ಯೂಟ್ ಆಫ್ ಜಿನೋಮಿಕ್ಸ್ ಇಂಟಿಗ್ರೇಟಿವ್ ಬಯಾಲಜಿ ಸಂಸ್ಥೆಗಳಿಗೆ ಸಂಬಂಧಿಸಿದ ಸಂಶೋಧಕರು ಅಧ್ಯಯನ ನಡೆಸಿದ್ದಾರೆ.

ಇದುವರೆಗೆ ಜನರಲ್ಲಿ SARS CoV 2 ಬಂದವರಿಗೆ ಮರು ಸೋಂಕು ಸಾಧ್ಯ ಎಂದು ಬಹುತೇಕ ದೃಢಪಟ್ಟಿದ್ದರೂ ತಟಸ್ಥಗೊಳಿಸುವ ಪ್ರತಿಕಾಯಗಳ ಉಪಸ್ಥಿತಿಯ ಹೊರತಾಗಿಯೂ ಪುನರಾವರ್ತಿತ ಸೋಂಕುಗಳು ಮೊದಲ ಸಲಕ್ಕಿಂತ ಗಂಭೀರವಾದ ಪರಿಣಾಮ ಉಂಟು ಮಾಡಬಲ್ಲವು ಎಂದು ಹೇಳಲಾಗಿದೆ.

ಸಾಂಕ್ರಾಮಿಕ ಕಾಯಿಲೆಗಳಿಗೆ ಹೆಸರಾದ ಕಸ್ತೂರಬಾ ಆಸ್ಪತ್ರೆ, ಪಿ.ಡಿ. ಹಿಂದುಜಾ ಆಸ್ಪತ್ರೆಗೆ ಸಂಬಂಧಿಸಿದ ಸಂಶೋಧಕರು ಎರಡನೇ ಸಲ ಕೊರೊನಾ ಸೋಂಕು ತಗುಲಿದವರ ಅಧ್ಯಯನ ಕೈಗೊಂಡಿದ್ದು ರೋಗಿಗಳ ಆರೋಗ್ಯ ಮೊದಲ ಸಲ ಸೋಂಕು ತಗಲುವುದಕ್ಕಿಂತ ಎರಡನೇ ಸಲ ಗಂಭೀರವಾಗಿತ್ತು ಎಂದು ಹೇಳಲಾಗಿದೆ.

ಪ್ಲಾಸ್ಮಾ ಚಿಕಿತ್ಸೆ ಒಳಪಟ್ಟ ರೋಗಿಯೊಬ್ಬರಿಗೆ ಸರಿಯಾದ ಚಿಕಿತ್ಸೆ ನಂತರವೂ ಮೂರು ವಾರಗಳವರೆಗೆ ನಿತ್ಯದ ಚಟುವಟಿಕೆಗಳ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ ಎಂದು ದಿ ಲ್ಯಾನ್ಸೆಟ್ ನಲ್ಲಿ ಪ್ರಕಟವಾದ ವರದಿಯಲ್ಲಿ ಮಾಹಿತಿ ನೀಡಲಾಗಿದೆ.

ಅಧ್ಯಯನಕ್ಕೆ ಒಳಪಡಿಸಲಾಗಿದ್ದ ರೋಗಿಗಳು ಮೇ ಮತ್ತು ಜೂನ್ ನಲ್ಲಿ ಮೊದಲ ಸಲ ಸೋಂಕಿತರಾಗಿ ಚೇತರಿಸಿಕೊಂಡಿದ್ದರು. ಜುಲೈನಲ್ಲಿ ಅವರಿಗೆ ಮತ್ತೆ ರೋಗ ಲಕ್ಷಣ ಕಂಡು ಬಂದಿದೆ. ವಿವರವಾದ ಜೀನೋಮ್ ಅನುಕ್ರಮದ ಮೂಲಕ ಸಂಶೋಧಕರು ಸೋಂಕಿನ 2 ಕಂತುಗಳಲ್ಲಿ ವೈರಸ್ ಪರಿಣಾಮ ಗಮನಿಸಿದ್ದಾರೆ. ಎರಡನೇ ಸಲ ಸೋಂಕು ತಗುಲಿದಾಗ ಪರಿಣಾಮ ಗಂಭೀರವಾಗಿರುತ್ತದೆ ಎನ್ನುವುದು ನಿಜವಾಗಿದ್ದರೂ ಪುರಾವೆಗಳು ವಿರಳವಾಗಿವೆ ರೋಗಿಗಳು ಚೇತರಿಸಿಕೊಂಡ ನಂತರ ಬಹಳ ಜಾಗರೂಕರಾಗಿರಬೇಕು ಎಂದು ವಿಜ್ಞಾನಿ ಡಾ. ಅನುರಾಗ್ ಅಗರ್ ವಾಲ್ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...