alex Certify ಕೊರೊನಾ ವಿರುದ್ಧದ ಹೋರಾಟದಲ್ಲಿ ಜೀವತೆತ್ತ ವಾರಿಯರ್ಸ್​ಗಾಗಿ ನಿರ್ಮಾಣವಾಗಲಿದೆ ಮ್ಯೂಸಿಯಂ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ವಿರುದ್ಧದ ಹೋರಾಟದಲ್ಲಿ ಜೀವತೆತ್ತ ವಾರಿಯರ್ಸ್​ಗಾಗಿ ನಿರ್ಮಾಣವಾಗಲಿದೆ ಮ್ಯೂಸಿಯಂ..!

ಕೊರೊನಾ ವೈರಸ್​ ವಿರುದ್ಧದ ಹೋರಾಟದಲ್ಲಿ ಜೀವತೆತ್ತವರಿಗೆ ಗೌರವ ಸಲ್ಲಿಸುವ ಸಲುವಾಗಿ ಕೊಲ್ಕತ್ತಾದ ವೈದ್ಯರು ಮ್ಯೂಸಿಯಂ ಸ್ಥಾಪನೆಗೆ ಪ್ಲಾನ್​ ಮಾಡಿದ್ದಾರೆ. ಮ್ಯೂಸಿಯಂನಲ್ಲಿ ಪಿಪಿಇ ಕಿಟ್​ಗಳು, ಮಾಸ್ಕ್​​ಗಳು, ಗ್ಲೌಸ್​ ಹಾಗೂ ಸ್ಯಾನಿಟೈಸರ್​​ ಸೇರಿದಂತೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಅಗತ್ಯ ಎಂದು ಪರಿಗಣಿಸಲಾದ ಎಲ್ಲಾ ವಸ್ತುಗಳನ್ನ ಇಡಲಾಗುತ್ತೆ ಎಂದು ಪಶ್ಚಿಮ ಬಂಗಾಳ ವೈದ್ಯರ ಫೋರಂನ ಡಾ. ರಾಜೀವ್​ ಪಾಂಡೆ ಹೇಳಿದ್ದಾರೆ.

ಈ ವಸ್ತು ಸಂಗ್ರಹಾಲಯ ನಿರ್ಮಾಣದ ವಿಚಾರವಾಗಿ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಸರ್ಕಾರದ ಅನುಮೋದನೆಗೆ ಕಾಯುತ್ತಿದ್ದೇವೆ ಎಂದು ಡಾ. ಪಾಂಡೆ ಹೇಳಿದ್ರು. 100 ವರ್ಷಗಳ ಬಳಿಕ ನಾವು ಇಂತಹದ್ದೊಂದು ಭಯಾನಕ ಸಾಂಕ್ರಾಮಿಕವನ್ನ ನೋಡುತ್ತಿದ್ದೇವೆ. ನಮ್ಮ ಅಜ್ಜಿ – ತಾತಂದಿರೂ ಸಹ ಇಂತಹ ಘಟನೆಯನ್ನ ಈ ಮೊದಲು ಕಂಡಿರಲಿಲ್ಲ ಎಂದು ಹೇಳಿದ್ರು.

ಕೊರೊನಾ ವಿರುದ್ಧದ ಹೋರಾಟದಲ್ಲಿ ಈಗಾಗಲೇ ನಾವು ನಮ್ಮ ರಾಜ್ಯದ 90 ವೈದ್ಯರನ್ನ ಕಳೆದುಕೊಂಡಿದ್ದೇವೆ. ಉಳಿದೆಲ್ಲ ಘಟನೆಗಳಂತೆ ಕಾಲ ಕಳೆದಂತೆ ಈ 90 ಮಂದಿ ವೈದ್ಯರೂ ಸಹ ನೆನಪಿನಿಂದ ಹೊರಟು ಹೋಗ್ತಾರೆ. ನಮ್ಮ ಮುಂದಿನ ಪೀಳಿಗೆಗೆ ಈ ವಾರಿಯರ್ಸ್​ ತ್ಯಾಗ ತಿಳಿಯದೇ ಹೋಗಬಹುದು. ಹೀಗಾಗಿ ನಾವು ವಸ್ತು ಸಂಗ್ರಹಾಲಯ ಸ್ಥಾಪನೆಗೆ ಮುಂದಾಗಿದ್ದೇವೆ. ಈ ವಸ್ತು ಸಂಗ್ರಹಾಲಯದಲ್ಲಿ ಜೀವ ತೆತ್ತ ಕೊರೊನಾ ವಾರಿಯರ್ಸ್​ ಬಗ್ಗೆಯೂ ಮಾಹಿತಿ ಇಡಲಾಗುತ್ತೆ. ಹೀಗಾಗಿ ಸರ್ಕಾರದಿಂದ ಮ್ಯೂಸಿಯಂ ಸ್ಥಾಪನೆಗೆ ಜಾಗಕ್ಕಾಗಿ ಬೇಡಿಕೆ ಇಟ್ಟಿದ್ದೇವೆ ಎಂದು ಹೇಳಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...