ಕೊರೊನಾ ಲಸಿಕೆ ಅಭಿಯಾನ ಜನವರಿ 16ರಿಂದ ಶುರುವಾಗಲಿದೆ. ದೊಡ್ಡ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ವ್ಯಾಕ್ಸಿನೇಷನ್ ಅಭಿಯಾನ ಶುರುವಾಗುವ ಮೊದಲೇ ನೀತಿ ಆಯೋಗ ಮಹತ್ವದ ಆದೇಶ ನೀಡಿದೆ. ತುರ್ತು ಬಳಕೆಗಾಗಿ ಮೀಸಲಿರುವ ಕೊರೊನಾ ಲಸಿಕೆಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅನುಮತಿ ನೀಡುವುದಿಲ್ಲವೆಂದು ನೀತಿ ಆಯೋಗ ಸ್ಪಷ್ಟಪಡಿಸಿದೆ.
ಸೀರಮ್ ಸಂಸ್ಥೆ ಹಾಗೂ ಭಾರತ್ ಬಯೋಟಿಕ್ ಲಸಿಕೆಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸದ್ಯ ಸಾಧ್ಯವಿಲ್ಲ. ಸರ್ಕಾರ ಅನುಮತಿ ನೀಡಿದ ನಂತ್ರ ಮಾರುಕಟ್ಟೆಯಲ್ಲಿ ಲಸಿಕೆ ಲಭ್ಯವಾಗಲಿದೆ ಎಂದು ನೀತಿ ಆಯೋಗದ ಅಧಿಕಾರಿಗಳು ಹೇಳಿದ್ದಾರೆ.
ಜನವರಿ 16ರಿಂದ ಲಸಿಕೆ ಅಭಿಯಾನ ಶುರುವಾಗಲಿದೆ. ಮುಂಚೂಣಿ ಕಾರ್ಯಕರ್ತರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುವುದು. ನಂತ್ರ 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು. ಭಾರತ್ ಬಯೋಟಿಕ್ ತನ್ನ ಲಸಿಕೆಯ ಒಂದು ಡೋಸ್ ಗೆ 295 ರೂಪಾಯಿಯಂತೆ ಸರ್ಕಾರಕ್ಕೆ ಮಾರಾಟ ಮಾಡ್ತಿದೆ. ಸೀರಮ್ ಸಂಸ್ಥೆ ಒಂದು ಡೋಸ್ ಗೆ 200 ರೂಪಾಯಿ ಚಾರ್ಜ್ ಮಾಡ್ತಿದೆ. ಭಾರತ್ ಬಯೋಟಿಕ್ ನ 55 ಲಕ್ಷ ಹಾಗೂ ಸೀರಮ್ ಕಂಪನಿಯ 1.1 ಕೋಟಿ ಡೋಸ್ ಗೆ ಸರ್ಕಾರ ಆರ್ಡರ್ ಮಾಡಿದೆ.