ಕೋವಿಡ್ ಸಂಕಷ್ಟದಿಂದ ಪಾರಾಗೋಕೆ ವಿಶ್ವದ ಎಲ್ಲ ರಾಷ್ಟ್ರಗಳು ಪರಿಣಾಮಕಾರಿಯಾದ ಲಸಿಕೆಯ ಹುಡುಕಾಟದಲ್ಲಿವೆ. ಇತ್ತ ಮೋದಿ ಸರ್ಕಾರ 2021ರ ಮೊದಲ ತ್ರೈಮಾಸಿಕದ ವೇಳೆಗೆ ಸಿಗಬಹುದು ಎನ್ನಲಾದ ಲಸಿಕೆಯ ಹಂಚಿಕೆ ಪ್ರಕ್ರಿಯೆಗೆ ಸಿದ್ಧತೆ ನಡೆಸಿದೆ.
ಆದ್ಯತೆಯ ಆಧಾರದ ಮೇಲೆ ಕೊರೊನಾ ಲಸಿಕೆ ಸಿಗಲಿದ್ದು. ರೋಗಿಗಳಿಗೆ ಉಚಿತವಾಗಿ ಲಸಿಕೆಯನ್ನ ನೀಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ ಎನ್ನಲಾಗಿದೆ.
ಕರೊನಾ ಹಂಚಿಕೆಗೆ ನಾಲ್ಕು ಆದ್ಯತೆಯ ವಿಭಾಗಗಳನ್ನ ಮಾಡಲಾಗಿದೆ. ಮೊದಲನೇ ಗುಂಪಿನಲ್ಲಿ ವೈದ್ಯ ಲೋಕದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಎಂಬಿಬಿಎಸ್ ವಿದ್ಯಾರ್ಥಿಗಳು ಬರಲಿದ್ದಾರೆ. ಎರಡನೇ ಗುಂಪಿನಲ್ಲಿ ಪೊಲೀಸ್ ಸಿಬ್ಬಂದಿ, ಸಶಸ್ತ್ರ ಪಡೆ ಸಿಬ್ಬಂದಿ ಹಾಗೂ ಪುರಸಭೆ ನಿಗಮ ಬರಲಿದೆ.
50 ವರ್ಷದಿಂದ ಮೇಲ್ಪಟ್ಟ ಸೋಂಕಿತರು ಆದ್ಯತೆಯ ಗುಂಪಿನಲ್ಲಿ ಸೇರುತ್ತಾರೆ. ಇವರಿಗೆ ಕರೊನಾದಿಂದಾಗುವ ಪರಿಣಾಮ ಜಾಸ್ತಿ ಹಿನ್ನೆಲೆ ಆದ್ಯತೆಯ ಪಟ್ಟಿಗೆ ಸೇರಿಸಲಾಗಿದೆ. ಅಲ್ಲದೇ 50 ವರ್ಷಕ್ಕಿಂತ ಕಮ್ಮಿ ಇದ್ದರೂ ಗಂಭೀರ ಗುಣಲಕ್ಷಣ ಹೊಂದಿರುವವರನ್ನ ಆದ್ಯತೆಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಇನ್ನು ಲಸಿಕೆಗಳ ಸರಬರಾಜು ಹಾಗೂ ಶೇಖರಣೆಗಾಗಿ 28 ಸಾವಿರ ಕೋಲ್ಡ್ ಚೈನ್ ಪಾಯಿಂಟ್ಗಳು, 700ಕ್ಕೂ ಅಧಿಕ ರೆಫ್ರಿಜರೇಟರ್ ವಾಹನಗಳನ್ನ ಸಿದ್ಧಪಡಿಸಲಿದ್ದೇವೆ ಅಂತಾ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.