ಕೊರೊನಾ ಸೋಂಕಿನ ವಿರುದ್ಧ ಲಸಿಕೆ ಪರಿಣಾಮಕಾರಿಯಾಗಿದೆ. ಸರ್ಕಾರ ಲಸಿಕೆ ಅಭಿಯಾನ ಶುರು ಮಾಡಿದೆ. ದೇಶದಲ್ಲಿ ತಯಾರಾಗಿರುವ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ಜೊತೆ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಬಳಸಲು ಅನುಮತಿ ಸಿಕ್ಕಿದೆ.
ತುರ್ತು ಪರಿಸ್ಥಿತಿಯಲ್ಲಿ ಸ್ಪುಟ್ನಿಕ್ ವಿ ಲಸಿಕೆ ಬಳಸಬಹುದಾಗಿದೆ. ಈಗಾಗಲೇ ಭಾರತಕ್ಕೆ ಸ್ಪುಟ್ನಿಕ್ ವಿ ಲಸಿಕೆ ಬಂದಿದ್ದು, ಈ ಮೂರು ಲಸಿಕೆಯಲ್ಲಿ ಯಾವುದು ಎಷ್ಟು ಪರಿಣಾಮಕಾರಿ ಹಾಗೂ ಯಾವ ಲಸಿಕೆಯ ಅಡ್ಡ ಪರಿಣಾಮವೇನು ಎಂಬುದರ ವಿವರ ಇಲ್ಲಿದೆ.
ಕೊರೊನಾ ವಿರುದ್ಧ ಹೋರಾಡಲು ರಷ್ಯಾದ ಸ್ಪುಟ್ನಿಕ್ ವಿ ಶೇಕಡಾ 91.6 ರಷ್ಟು ಪರಿಣಾಮಕಾರಿಯಾಗಿದೆ. ಕೋವಾಕ್ಸಿನ್ ಶೇಕಡಾ 81 ರಷ್ಟು ಪರಿಣಾಮಕಾರಿಯಾಗಿದ್ದರೆ ಕೋವಿಶೀಲ್ಡ್ ಶೇಕಡಾ 70.4 ರಷ್ಟು ಪರಿಣಾಮಕಾರಿಯಾಗಿದೆ. ಎರಡು ಡೋಸ್ ಗಳ ನಡುವೆ ಅಗತ್ಯವಾದ ಅಂತರವಿದ್ದಲ್ಲಿ ಇದನ್ನು ಶೇಕಡಾ 90 ರಷ್ಟು ಹೆಚ್ಚಿಸಬಹುದು.
ರಷ್ಯಾದ ಸ್ಪುಟ್ನಿಕ್ ವಿ ಎರಡು ವಿಭಿನ್ನ ಅಡೆನೊವೈರಸ್ ಗಳಿಂದ ಕೂಡಿದೆ. ಕೋವಿಶೀಲ್ಡ್ ಸ್ಪುಟ್ನಿಕ್ ಮಾದರಿಯ ಲಸಿಕೆಯಾಗಿದೆ. ಸಾಮಾನ್ಯ ಶೀತದ ವೈರಸ್ ದುರ್ಬಲಗೊಳಿಸುವ ಆವೃತ್ತಿಯಿಂದ ತಯಾರಿಸಲಾಗುತ್ತದೆ. ಕೋವ್ಯಾಕ್ಸಿನ್ ಸತ್ತ ಕೊರೊನಾ ವೈರಸ್ ನಿಂದ ತಯಾರಿಸಿದ ಲಸಿಕೆಯಾಗಿದೆ.
ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯನ್ನು 60 ದೇಶಗಳಲ್ಲಿ ಬಳಸಲಾಗ್ತಿದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ತಲೆ ನೋವು, ದಣಿವು, ಇಂಜೆಕ್ಷನ್ ಹಾಕಿದ ಸ್ಥಳದಲ್ಲಿ ನೋವು, ಜ್ವರ ಕಾಣಿಸಿಕೊಳ್ಳುತ್ತದೆ. ಆದ್ರೆ ಯಾವುದೇ ಗಂಭೀರ ಅಡ್ಡಪರಿಣಾಮ ಕಾಣಿಸಿಲ್ಲ.
ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ಈ ಲಸಿಕೆ ತೆಗೆದುಕೊಂಡ ನಂತ್ರ ಇಂಜೆಕ್ಷನ್ ಪಡೆದ ಸ್ಥಳದಲ್ಲಿ ನೋವು, ಕೆಂಪಾಗುವುದು, ಜ್ವರ, ನಡುಕ, ದೇಹದಲ್ಲಿ ನೋವು, ವಾಕರಿಕೆ ಮತ್ತು ವಾಂತಿ, ತಲೆ ನೋವು, ದದ್ದುಗಳು ಕಾಣಿಸಿಕೊಳ್ಳುತ್ತವೆ.
ಕೋವಿಶೀಲ್ಡ್ ವಿಶ್ವದ 62 ದೇಶಗಳಲ್ಲಿ ಬಳಸಲಾಗುತ್ತಿದೆಯಾದರೂ, ಪ್ರಸ್ತುತ ಈ ಲಸಿಕೆ ಪಡೆದ ವೇಳೆ ಇಂಜೆಕ್ಷನ್ ಸ್ಥಳದಲ್ಲಿ ನೋವು, ಇಂಜೆಕ್ಷನ್ ಸ್ಥಳದಲ್ಲಿ ಕೆಂಪು ಕಲೆ, ಜ್ವರ, ಜಡತೆ ಮತ್ತು ಅರೆನಿದ್ರಾವಸ್ಥೆ, ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ಪ್ರಸ್ತುತ 18 ರಿಂದ 44 ವರ್ಷದೊಳಗಿನ ಜನರು ಲಸಿಕೆಯನ್ನು ಖಾಸಗಿ ಕೇಂದ್ರದಲ್ಲಿ ಆಯ್ಕೆ ಮಾಡಬಹುದು. ಆದರೆ 45 ವರ್ಷಕ್ಕಿಂತ ಮೇಲ್ಪಟ್ಟ ಜನರು, ಆರೋಗ್ಯ ಸೇವಕರು ಮತ್ತು ಕಾರ್ಮಿಕರಿಗೆ ಲಸಿಕೆ ಆಯ್ಕೆ ಮಾಡುವ ಆಯ್ಕೆ ಇರುವುದಿಲ್ಲ. ಇದಲ್ಲದೆ ಸರ್ಕಾರದ ಲಸಿಕೆ ಕೇಂದ್ರದಲ್ಲಿ ಲಭ್ಯವಿರುವ ಲಸಿಕೆಯ ಆಧಾರದ ಮೇಲೆ ಲಸಿಕೆ ಅಳವಡಿಸಲಾಗುವುದು.
ರಕ್ತಸ್ರಾವಕ್ಕೆ ಸಂಬಂಧಿಸಿದ ಕಾಯಿಲೆ ಇರುವ ಜನರು, ರಕ್ತ ತೆಳುವಾಗಲ ಔಷಧಿ ತೆಗೆದುಕೊಳ್ಳುತ್ತಿರುವ ಜನರು, ಗರ್ಭಿಣಿಯರು, ಸ್ತನ್ಯಪಾನ ಮಾಡಿಸುವ ಮಹಿಳೆಯರು ಲಸಿಕೆ ತೆಗೆದುಕೊಳ್ಳಬಾರದು.