ಕೆಲವೇ ದಿನಗಳಲ್ಲಿ ಭಾರತದಲ್ಲಿ ಕೊರೊನಾ ಲಸಿಕೆ ನೀಡುವ ಕಾರ್ಯ ಶುರುವಾಗಲಿದೆ. ಪ್ರತಿಯೊಬ್ಬರು ಕೊರೊನಾದ ಎರಡು ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಎರಡು ಲಸಿಕೆಯನ್ನು ಒಂದೇ ಬಾರಿ ಹಾಕಲಾಗುವುದಿಲ್ಲ. ಅಮೆರಿಕಾದಲ್ಲಿ ಒಂದು ಲಸಿಕೆ ಹಾಕಿದ ಕೆಲ ದಿನಗಳ ನಂತರ ಮತ್ತೊಂದು ಲಸಿಕೆ ಹಾಕಲಾಗ್ತಿದೆ.
ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಮೊದಲು ಇದ್ರ ಬಗ್ಗೆ ತಿಳಿದುಕೊಳ್ಳಬೇಕು. ಕೊರೊನಾದ ಎರಡು ಲಸಿಕೆ ಏಕೆ ಬೇಕು ? ಒಂದೇ ಲಸಿಕೆ ಸಾಕಾಗುವುದಿಲ್ವಾ ಎಂಬ ಪ್ರಶ್ನೆ ಏಳುವುದು ಸಾಮಾನ್ಯ. ಒಂದು ಲಸಿಕೆ ಕೊರೊನಾ ಓಡಿಸುವ ಸಾಮರ್ಥ್ಯ ಹೊಂದಿಲ್ಲ. ಅದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೊರೊನಾ ವೈರಸ್ ನಿಯಂತ್ರಿಸುತ್ತದೆ. ಇನ್ನೊಂದು ಲಸಿಕೆ ಸಂಪೂರ್ಣ ಬಲ ನೀಡುತ್ತದೆ. ಹಾಗಾಗಿ ಕೊರೊನಾದ ಎರಡು ಲಸಿಕೆ ಅನಿವಾರ್ಯವಾಗಿದೆ.
ಸಾಮಾನ್ಯವಾಗಿ ಏಳುವ ಇನ್ನೊಂದು ಪ್ರಶ್ನೆ ಎಂದ್ರೆ ಅಂತರದ ಬಗ್ಗೆ. ಒಂದೇ ಬಾರಿ ಎರಡು ಲಸಿಕೆ ಯಾಕೆ ಹಾಕಬಾರದು ಎಂಬುದಕ್ಕೂ ಇಲ್ಲಿ ಉತ್ತರವಿದೆ. ಮೊದಲಿಗಿಂತ ಎರಡನೇ ಡೋಸ್ ಪ್ರಮಾಣ ಕಡಿಮೆಯಿರುತ್ತದೆ. ಯಾವುದೇ ಲಸಿಕೆ ಅಡ್ಡ ಪರಿಣಾಮ ದೀರ್ಘ ಕಾಲದವರೆಗೆ ಇರುವುದಿಲ್ಲ.
ಲಸಿಕೆ ನೀಡುವ ಅಂತರ ಬೇರೆ ಬೇರೆ ಲಸಿಕೆಗೆ ಬೇರೆ ಬೇರೆಯಾಗಿರುತ್ತದೆ. ಸಾಮಾನ್ಯವಾಗಿ ಎರಡರ ಮಧ್ಯೆ 21-28 ದಿನಗಳ ವ್ಯತ್ಯಾಸವಿರುತ್ತದೆ. ಎರಡು ಡೋಸ್ ಗಳನ್ನು ಹೇಗೆ ನೀಡಬೇಕು ಎಂಬ ಬಗ್ಗೆಯೂ ಚರ್ಚೆಯಾಗ್ತಿದೆ. ಮೊದಲು ಭಾರತೀಯರಿಗೆ ಮೊದಲ ಡೋಸ್ ನೀಡಿ ನಂತ್ರ ಎರಡನೇ ಡೋಸ್ ನೀಡಬೇಕಾ ಎಂಬ ಪ್ರಶ್ನೆಯಿದೆ. ಆದ್ರೆ ಒಂದು ಲಸಿಕೆ ನೀಡಿದ 12 ವಾರಗಳ ನಂತ್ರ ಮತ್ತೊಂದು ಡೋಸನ್ನು ಅದೇ ಕಾರ್ಯಕರ್ತರು ನೀಡಬೇಕೆನ್ನಲಾಗುತ್ತಿದೆ.