alex Certify ಜಡ್ಜ್​ ಹಾಗೂ ವಕೀಲರಿಗೆ ಆದ್ಯತೆಯ ಆಧಾರದ ಮೇಲೆ ಲಸಿಕೆ ನೀಡಲು ಕೇಂದ್ರದ ವಿರೋಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಡ್ಜ್​ ಹಾಗೂ ವಕೀಲರಿಗೆ ಆದ್ಯತೆಯ ಆಧಾರದ ಮೇಲೆ ಲಸಿಕೆ ನೀಡಲು ಕೇಂದ್ರದ ವಿರೋಧ

ನ್ಯಾಯಾಧೀಶರು, ವಕೀಲರು ಹಾಗೂ ಕೋರ್ಟ್​ನ ಇತರೆ ಸಿಬ್ಬಂದಿಯನ್ನ ಕೊರೊನಾ ಲಸಿಕೆಯ ಆದ್ಯತೆಯ ಪಟ್ಟಿಗೆ ಸಲ್ಲಿಸುವಂತೆ ಕೋರಿ ಸುಪ್ರೀಂ ಕೋರ್ಟ್​ಗೆ ಸಲ್ಲಿಸಲಾಗಿದ್ದ ಅರ್ಜಿಗೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. 45 ವರ್ಷ ಕೆಳಗಿನ ನ್ಯಾಯಾಧೀಶರು, ವಕೀಲರು ಹಾಗೂ ಕೋರ್ಟ್​ ಸಿಬ್ಬಂದಿಯನ್ನ ಪ್ರತ್ಯೇಕ ಆದ್ಯತೆಯ ಪಟ್ಟಿಗೆ ಸೇರಿಸೋದು ಸೂಕ್ತವಲ್ಲ ಎಂದು ಹೇಳಿದೆ.

45 ವರ್ಷ ಒಳಗಿನ ಕೋರ್ಟ್​ನ ಸಿಬ್ಬಂದಿಗೆ ಕೊರೊನಾ ಲಸಿಕೆಯಲ್ಲಿ ಆದ್ಯತೆ ನೀಡುವ ಪ್ರಶ್ನೆ ಉದ್ಭವಿಸೋದಿಲ್ಲ. ಈ ರೀತಿ ಮಾಡಿದ್ರೆ ಉದ್ಯಮಿಗಳಿಗೆ ಇತರೆ ಕೆಲಸಗಾರರಿಗೆ ತಾರತಮ್ಯ ಮಾಡಿದಂತೆ ಆಗುತ್ತೆ ಎಂದು ಕೇಂದ್ರ ಸರ್ಕಾರ ಕೋರ್ಟ್​ಗೆ ಮನವರಿಕೆ ಮಾಡಿಕೊಟ್ಟಿದೆ.

ಅಲ್ಲದೇ ಕೋರ್ಟ್​ನಲ್ಲಿ ಕೆಲಸ ಮಾಡುವ 45 ವರ್ಷ ಮೇಲ್ಪಟ್ಟ ಅಸ್ವಸ್ಥರು ಹಾಗೂ 60 ವರ್ಷದ ಸಿಬ್ಬಂದಿಗೆ ಈಗಾಗಲೇ ಲಸಿಕೆ ಸಿಗುತ್ತದೆ. ಹೀಗಾಗಿ ಪ್ರತ್ಯೇಕ ಆದ್ಯತೆಯ ಲಿಸ್ಟ್​ನ ಅವಶ್ಯಕತೆ ಉದ್ಭವಿಸೋದಿಲ್ಲ ಎಂತಲೂ ಕೇಂದ್ರ ಹೇಳಿದೆ.

ಅರವಿಂದ್​ ಸಿಂಗ್​ ಎಂಬವರು ನ್ಯಾಯಾಧೀಶರು, ವಕೀಲರು ಹಾಗೂ ಕೋರ್ಟ್​ ಸಿಬ್ಬಂದಿಯನ್ನ ಕೊರೊನಾ ಲಸಿಕೆಯ ಆದ್ಯತೆಯ ಪಟ್ಟಿಗೆ ಸೇರಿಸಿ ಎಂದು ಸುಪ್ರಿಂ ಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿ ಸಂಬಂಧ ಕೇಂದ್ರ ಸರ್ಕಾರ ಈ ಅಫಿಡವಿಟ್​ನ್ನು ಸಲ್ಲಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...