ಕೊರೊನಾ ಸೋಂಕಿತರಿಗೆ ಈಗಾಗಲೇ ಸರ್ಕಾರಿ ಆಸ್ಪತ್ರೆಯಲ್ಲಷ್ಟೆ ಅಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ಸಿಗುತ್ತಿದೆ. ಆದರೆ ಸರ್ಕಾರವೇ ಇದಕ್ಕೊಂದು ದರ ನಿಗದಿ ಮಾಡಿದೆ. ಇಷ್ಟಾದರೂ ಇನ್ನೂ ಕೆಲವೊಂದು ಆಸ್ಪತ್ರೆಗಳಲ್ಲಿ ದರದ ಬಗ್ಗೆ ಸ್ಷಷ್ಟತೆ ಇಲ್ಲ. ಆದರೆ ಸರ್ಕಾರ ನಿಗದಿಪಡಿಸಿದ ದರವನ್ನೇ ಪಡೆಯಬೇಕು ಎಂಬ ನಿಯಮವಿದೆ. ಇದರ ಬೆನ್ನಲ್ಲೇ ಇದೀಗ ನೀತಿ ಆಯೋಗದ ಪ್ರಸ್ತಾವನೆಯನ್ನು ಆಧಾರವಾಗಿಟ್ಟುಕೊಂಡು, ಜನರಲ್ ಇನ್ಶುರೆನ್ಸ್ ಕೌನ್ಸಿಲ್ ಗರಿಷ್ಠ ಚಿಕಿತ್ಸೆಯ ಶುಲ್ಕ ಪಟ್ಟಿಯ ಅಡ್ವೈಸರಿ ಜಾರಿಗೊಳಿಸಿದೆ.
ಹೌದು, ಆಸ್ಪತ್ರೆಗಳು ಮತ್ತು ವಿಮಾ ಕಂಪನಿಗಳಿಗೆ ಜನರಲ್ ಇನ್ಸುರೆನ್ಸೆ ಕೌನ್ಸಿಲ್ ಚಿಕಿತ್ಸೆಯ ದರಗಳನ್ನು ನಿಗದಿಪಡಿಸಿದೆ. ನಿಗದಿಪಡಿಸಿದ ದರವನ್ನೇ ಪಡೆಯಬೇಕೆಂದು ತಿಳಿಸಿದೆ. ಇದನ್ನು ಜಾರಿ ಮಾಡಲು ಮುಖ್ಯ ಕಾರಣ ಎಂದರೆ, ಇಷ್ಟು ದಿನ ಖಾಸಗಿ ಆಸ್ಪತ್ರೆಯಲ್ಲಿನ ಹೆಚ್ಚಿನ ಶುಲ್ಕ. ಹೀಗಾಗಿ ಇನ್ಮುಂದೆ ರೋಗಿಗಳು ತಮ್ಮ ಬಳಿ ಇರುವ ಪಾಲಸಿಗೆ ಅನುಗುಣವಾಗಿ ಆಸ್ಪತ್ರೆಯನ್ನು ಆಯ್ಕೆ ಮಾಡಬಹುದು. ಹಾಗೂ ಆ ಪಾಲಿಸಿಗೆ ಅನುಗುಣವಾಗಿ ಚಿಕಿತ್ಸೆ ಪಡೆಯಬಹುದಾಗಿದೆ.