ಕೊರೊನಾ ವೈರಸ್ ರೋಗಿಗಳ ಮೂಗು, ಬಾಯಿ ಮಾತ್ರ ಸೋಂಕು ಹರಡುವ ಸ್ಥಳವಲ್ಲ. ಮಲದಿಂದ ಕೂಡ ಕೊರೊನಾ ಸೋಂಕು ಹರಡುತ್ತದೆ. ಇದ್ರ ಪತ್ತೆಗೆ ಹೈದ್ರಾಬಾದ್ ನಲ್ಲಿ ಪರೀಕ್ಷೆಯೊಂದು ನಡೆದಿದೆ. ಒಳಚರಂಡಿ ಪರೀಕ್ಷೆ ನಡೆಸಿ ಮಹತ್ವದ ವಿಷ್ಯವನ್ನು ಹೊರಹಾಕಲಾಗಿದೆ.
ಕೊರೊನಾ ಸೋಂಕಿತ ವ್ಯಕ್ತಿ ಸುಮಾರು 34 ದಿನಗಳ ಕಾಲ ವೈರಸ್ ಹೊರ ಹಾಕ್ತಾನೆ. ಆದ್ರೆ ಈ ವೈರಸ್ ಗಳು ಇನ್ನೊಬ್ಬರಿಗೆ ಕೊರೊನಾ ಹರಡುವ ಶಕ್ತಿ ಹೊಂದಿರುವುದಿಲ್ಲ. ಹೈದರಾಬಾದ್‌ನಲ್ಲಿ ಪ್ರತಿದಿನ 180 ಕೋಟಿ ಲೀಟರ್ ನೀರನ್ನು ಬಳಸಲಾಗುತ್ತದೆ. ಇದರಲ್ಲಿ ಶೇಕಡಾ 40ರಷ್ಟು ಒಳಚರಂಡಿ ಸಂಸ್ಕರಣಾ ಘಟಕಗಳಿಗೆ ಹೋಗುತ್ತದೆ. ಎಸ್‌ಟಿಪಿಯಿಂದ ಒಳಚರಂಡಿ ಮಾದರಿಯನ್ನು ತೆಗೆದುಕೊಂಡು ಪರೀಕ್ಷೆ ಮಾಡಲಾಗಿದೆ.
ಹೈದ್ರಾಬಾದ್ ನಲ್ಲಿ ಸುಮಾರು 2 ಲಕ್ಷ ಜನರು ಪ್ರತಿದಿನ ತಮ್ಮ ಮಲದಿಂದ ಕೊರೊನಾ ವೈರಸ್‌ನ ಸಾವಯವ ಭಾಗಗಳನ್ನು ನಿರಂತರವಾಗಿ ತೆಗೆದುಹಾಕುತ್ತಿದ್ದಾರೆ. ಈ ಡೇಟಾವನ್ನು ಪರಿಶೀಲಿಸಿದಾಗ ಹೈದರಾಬಾದ್‌ನಲ್ಲಿ ಸುಮಾರು 6.6 ಲಕ್ಷ ಜನರು ಕೊರೊನಾದಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಕಳೆದ 35 ದಿನಗಳಲ್ಲಿ ಲಕ್ಷಣ ರಹಿತ, ಲಕ್ಷಣವುಳ್ಳ ಮತ್ತು ಕೊರೊನಾದಿಂದ ಚೇತರಿಸಿಕೊಂಡವರೆಲ್ಲರೂ ಇದರಲ್ಲಿ ಸೇರಿದ್ದಾರೆ. ಹಾಗೆ ಸಾಮಾನ್ಯ ಲೆಕ್ಕಾಚಾರದ ಪ್ರಕಾರ, ಹೈದರಾಬಾದ್‌ನಲ್ಲಿ 2.6 ಲಕ್ಷ ಸಕ್ರಿಯ ಕೊರೊನಾ ಪ್ರಕರಣಗಳಿವೆ.