alex Certify ರೆಮಿಡೆಸಿವರ್​ ಬಳಕೆ ಬಗ್ಗೆ ಸ್ಪಷ್ಟನೆ ಕೇಳಿ ಕೇಂದ್ರಕ್ಕೆ ಸುಪ್ರೀಂ ನೋಟಿಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೆಮಿಡೆಸಿವರ್​ ಬಳಕೆ ಬಗ್ಗೆ ಸ್ಪಷ್ಟನೆ ಕೇಳಿ ಕೇಂದ್ರಕ್ಕೆ ಸುಪ್ರೀಂ ನೋಟಿಸ್

ಭಾರತದಲ್ಲಿ ಕೊರೊನಾ ವಿರುದ್ಧದ ಚಿಕಿತ್ಸೆಗೆ ಅನುಮತಿ ಇಲ್ಲದ ರೆಮಿಡೆಸಿವರ್​ ಹಾಗೂ ಫವಿಪಿರಾವೀರ್​ ಎಂಬ ಲಸಿಕೆಗಳನ್ನ ಬಳಸಲಾಗ್ತಿದೆ ಎಂಬ ಆರೋಪ ಸಂಬಂಧ ಸುಪ್ರಿಂ ಕೋರ್ಟ್ ಕೇಂದ್ರ ಸರ್ಕಾರದ ಬಳಿ ಪ್ರತಿಕ್ರಿಯೆ ಕೇಳಿದೆ.

ಮುಖ್ಯ ನ್ಯಾಯಮೂರ್ತಿ ಎಸ್.​ಎ. ಬೋಬ್ಡೆ ನೇತೃತ್ವದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿದ ಬಳಿಕ ಅನುಮೋದನೆ ಪಡೆಯದ ಲಸಿಕೆಗಳ ಬಳಕೆ ವಿಚಾರವಾಗಿ 4 ವಾರಗಳಲ್ಲಿ ಪ್ರತಿಕ್ರಿಯೆ ನೀಡಬೇಕು ಅಂತಾ ಕೇಂದ್ರ ಸರ್ಕಾರಕ್ಕೆ ನೋಟಿಸ್​ ನೀಡಿದೆ.

ಕೊರೊನಾ ರೋಗಿಗಳಿಗೆ ರೆಮಿಡೆಸಿವರ್​ ಹಾಗೂ ಫವಿಪಿರಾವೀರ್​ ಎಂಬ ಲಸಿಕೆಯನ್ನ ಚಿಕಿತ್ಸೆ ರೂಪದಲ್ಲಿ ನೀಡಲಾಗ್ತಿದೆ. ಆದರೆ ಈ ಲಸಿಕೆಗಳಿಗೆ ಇನ್ನು ಅನುಮೋದನೆಯೇ ಸಿಗದ ಮೇಲೆ ಹೇಗೆ ರೋಗಿಗಳ ಮೇಲೆ ಪ್ರಯೋಗ ಮಾಡ್ತಿದ್ದೀರಾ ಎಂದು ಔಷಧಿ ಸಂಶೋಧಕರು ಪ್ರಶ್ನೆ ಮಾಡಿದ್ದರು. ಹೀಗಾಗಿ ಮಾನ್ಯವಿಲ್ಲದ ಔಷಧಿ ಮಾರಾಟ ಮಾಡಿದ ಆರೋಪದಡಿಯಲ್ಲಿ ಭಾರತದ 10 ಔಷಧೀಯ ಸಂಸ್ಥೆಗಳ ವಿರುದ್ಧ ಎಫ್​ಐಆರ್​ ದಾಖಲಿಸಿ ಅಂತಾ ಸುಪ್ರೀಂ ಕೋರ್ಟ್​ಗೆ ಮನವಿ ಸಲ್ಲಿಕೆಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...