ಕೋವಿಡ್-19 ಸೋಂಕು ಅನೇಕ ವೈದ್ಯರುಗಳಿಗೆ ದುಡ್ಡು ಮಾಡುವ ಅವಕಾಶವಾಗಿ ಕಾಣುತ್ತಿದೆ ಎಂಬ ಆಪಾದನೆಗಳ ನಡುವೆಯೇ ಅನೇಕ ವೈದ್ಯರು ತಮ್ಮಲ್ಲಿಗೆ ಬರುವ ಕೋವಿಡ್ ಸೋಂಕಿತರನ್ನು ಉಚಿತವಾಗಿ ಶುಶ್ರೂಷೆ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿರುವ ನಿದರ್ಶನಗಳು ಅನೇಕ ಇವೆ.
ಇಂಥ ವೈದ್ಯರಲ್ಲಿ ಒಬ್ಬರಾದ ಆಂಧ್ರ ಪ್ರದೇಶದ ಕಡಪಾದ ಡಾ. ಎಸ್. ಸಾಗರ್ ಕುಳ್ಯರೆಡ್ಡಿ. ಇವರು ತಮ್ಮ ರೋಗಿಗಳಿಗೆ ’ಇ-ಸಂಜೀವಿನಿ ಒಪಿಡಿ ಉಚಿತ ವೈದ್ಯಕೀಯ ಸೇವೆ’ ಮೂಲಕ ಉಚಿತವಾಗಿ ಟೆಲೆಕನ್ಸಲ್ಷೇಷನ್ ಒದಗಿಸುತ್ತಿದ್ದಾರೆ.
ರಾಜೀವ್ ಗಾಂಧಿ ವೈದ್ಯಕೀಯ ಸಂಸ್ಥೆಯಲ್ಲಿ 2015ರಲ್ಲಿ ಎಂಬಿಬಿಎಸ್ ಪದವಿ ಪೂರೈಸಿರುವ ರೆಡ್ಡಿ ಸದ್ಯ ಸ್ನಾತಕೋತ್ತರ ಅಧ್ಯಯನಕ್ಕೆ ಸಜ್ಜಾಗುತ್ತಿದ್ದಾರೆ.
ಪಾಪ್ಸಿಕಲ್ ಕಡ್ಡಿ ಕಲಾಕೃತಿ ಮೂಲಕ ಗಿನ್ನೆಸ್ ದಾಖಲೆ ಸೇರಿದ 12ರ ಪೋರ
ಕಳೆದ ವರ್ಷ ತಮ್ಮ ವೈದ್ಯಕೀಯ ಪದವಿಯ ಅಂತಿಮ ವರ್ಷದ ವ್ಯಾಸಾಂಗದಲ್ಲಿದ್ದ ವೇಳೆ ರೆಡ್ಡಿ ಕೋವಿಡ್-19 ಸೋಂಕಿತರಿಗೆ ಶುಶ್ರೂಷೆ ಮಾಡಲು ಆರಂಭಿಸಿದ್ದರು. ಈ ವರ್ಷ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದ ಸಂದರ್ಭದಲ್ಲಿ ತಮ್ಮ ಉಚಿತ ಸೇವೆಯನ್ನು ಅಬಾಧಿತವಾಗಿ ಮುಂದುವರೆಸಿದ್ದಾರೆ.
ಪ್ರತಿನಿತ್ಯ ಸರಾಸರಿ 30 ಕರೆಗಳನ್ನು ಸ್ವೀಕರಿಸುವ ರೆಡ್ಡಿ, ಪ್ರತಿಯೊಬ್ಬರ ಸಮಸ್ಯೆಗಳನ್ನೂ ತಾಳ್ಮೆಯಿಂದ ಆಲಿಸಿ, ರೋಗಲಕ್ಷಣಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಸೂಕ್ತವಾದ ವೈದ್ಯಕೀಯ ಸಲಹೆಗಳನ್ನು ಕೊಡುತ್ತಿದ್ದಾರೆ.