ದೇಶದಲ್ಲಿ ಕೊರೊನಾ ಅಟ್ಟಹಾಸ ತಹಬದಿಗೆ ತರೋದು ಕಷ್ಟವಾಗ್ತಿದೆ. ಈ ನಡುವೆ ವೈದ್ಯಕೀಯ ಸೌಲಭ್ಯಗಳ ಕೊರತೆ ಒಂದೆಡೆಯಾದ್ರೆ ಸಣ್ಣ ವಯಸ್ಸಿನವರೂ ಕೊರೊನಾದಿಂದಾಗಿ ಜೀವ ಚೆಲ್ತಿರೋದು ಮತ್ತೊಂದು ಆತಂಕದ ವಿಚಾರವಾಗಿದೆ.
ಈ ಎಲ್ಲಾ ಆತಂಕದ ನಡುವೆಯೇ ಸೋಶಿಯಲ್ ಮೀಡಿಯಾದಲ್ಲಿ ಮನಸ್ಸಿಗೆ ಮುದ ನೀಡುವಂತಹ ದೃಶ್ಯವೊಂದು ವೈರಲ್ ಆಗಿದ್ದು ನೆಟ್ಟಿಗರ ಕಣ್ಣಲ್ಲಿ ಭರವಸೆಯ ಮಂದಹಾಸವನ್ನ ಬೆಳಗಿಸಿದೆ.
ದೆಹಲಿಯ ಸರ್ದಾರ್ ಪಟೇಲ್ ಕೋವಿಡ್ ಕೇಂದ್ರದಲ್ಲಿ ಚಿತ್ರೀಕರಿಸಿದ ವಿಡಿಯೋ ಇದಾಗಿದ್ದು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗುತ್ತಿರುವವರಿಗೆ ಆಸ್ಪತ್ರೆ ಸಿಬ್ಬಂದಿ ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ ಬೀಳ್ಕೊಟ್ಟಿದ್ದಾರೆ.
ಕೊರೊನಾ ಗೆದ್ದು ಖುಷಿಯಲ್ಲಿರುವ ಜನತೆ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿ ಅಲ್ಲಿಂದ ತೆರಳುತ್ತಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ನಿಮ್ಮ ಮೊಗದಲ್ಲಿರುವ ಈ ಖುಷಿ ಜೀವಮಾನ ಪೂರ್ತಿ ನಿಮ್ಮೊಂದಿಗೆ ಇರಲಿ ಎಂದು ಹರಸಿದ್ದಾರೆ.
https://www.instagram.com/p/CPTVnFqFWf9/?utm_source=ig_web_copy_link