ಕೊರೊನಾ ವೈರಸ್ ಸೌಮ್ಯ ಲಕ್ಷಣವುಳ್ಳವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ ಚಿಕಿತ್ಸೆ ಪಡೆಯುವವರು ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಕೆಲವೊಂದು ಸಲಹೆಗಳನ್ನು ನೀಡಿದೆ. ಕೊರೊನಾ ರೋಗಿಗಳು ಅಪ್ಪಿತಪ್ಪಿಯೂ ಕೆಲವೊಂದು ಔಷಧಿಯನ್ನು ತೆಗೆದುಕೊಳ್ಳಬಾರದೆಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸಲಹೆ ನೀಡಿದೆ.
ಹೃದಯ ರೋಗಿಗಳಿಗೆ ಅಪಾಯಕಾರಿ ಎಂದೇ ಸಾಭೀತಾಗಿರುವ Ibuprofen ಸೇರಿದಂತೆ ಕೆಲವು ನೋವಿನ ಮಾತ್ರೆಗಳನ್ನು ಸೇವಿಸಬಾರದು. ಇದ್ರಿಂದ ಕೊರೊನಾ ಸಮಸ್ಯೆ ಜಾಸ್ತಿಯಾಗಲಿದೆ. ಮೂತ್ರಪಿಂಡ ವೈಫಲ್ಯದ ಅಪಾಯ ಹೆಚ್ಚಾಗಲಿದೆ ಎಂದು ಐಸಿಎಂಆರ್ ಹೇಳಿದೆ.
ಸ್ಟೀರಾಯ್ಡ್ ಅಲ್ಲದ ಉರಿಯೂತದ ಔಷಧಿಯನ್ನು ತೆಗೆದುಕೊಂಡಲ್ಲಿ ಅನಾರೋಗ್ಯದ ಸಮಸ್ಯೆ ಹೆಚ್ಚಾಗಲಿದೆ. ಇದ್ರ ಬದಲು ಪ್ಯಾರೆಸಿಟಮಲ್ ಮಾತ್ರೆಯನ್ನು ಸೇವಿಸಬೇಕೆಂದು ಐಸಿಎಂಆರ್ ಹೇಳಿದೆ.
ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಮಸ್ಯೆ ಹೊಂದಿರುವವರಿಗೆ ರೋಗ ಲಕ್ಷಣ ಹೆಚ್ಚು. ಹಾಗಾಗಿ ಹೆಚ್ಚಿನ ಕಾಳಜಿ ಅಗತ್ಯವೆಂದು ಐಸಿಎಂಆರ್ ಹೇಳಿದೆ.