
ನವದೆಹಲಿ: ಎಲ್ಲಾ ಜನರಿಗೆ ಕೊರೋನಾ ಲಸಿಕೆ ಸಿಗುವಂತೆ ಮಾಡಲು ಕೇಂದ್ರ ಸರ್ಕಾರ ಕ್ರಮಕೈಗೊಂಡಿದ್ದು, ಲಸಿಕೆಗಾಗಿ ಹಣವನ್ನು ಕಾಯ್ದಿರಿಸಲಾಗಿದೆ.
ಬರೋಬ್ಬರಿ 50 ಸಾವಿರ ಕೋಟಿ ರೂಪಾಯಿ ಹಣವನ್ನು ಕೇಂದ್ರ ಸರ್ಕಾರ ತೆಗೆದಿಟ್ಟಿದೆ. ಒಬ್ಬರಿಗೆ ಲಸಿಕೆ ನೀಡಲು 450 ರಿಂದ 500 ರೂಪಾಯಿ ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ.
ಮಾರ್ಚ್ 31ರವರೆಗೆ ಕೇಂದ್ರ ಸರ್ಕಾರ ಹಣ ತೆಗೆದಿಟ್ಟಿದೆ. ವ್ಯಕ್ತಿಯೊಬ್ಬರಿಗೆ 2 ಇಂಜೆಕ್ಷನ್ ನೀಡಲು 150 ರೂಪಾಯಿ ಖರ್ಚಾಗುತ್ತದೆ. ಲಸಿಕೆಯ ದಾಸ್ತಾನು, ಸಾಗಣೆಗೆ 150 ರಿಂದ 225 ಕೋಟಿ ರೂಪಾಯಿ ಬೇಕಾಗುತ್ತದೆ ಎನ್ನಲಾಗಿದ್ದು, ಮೊದಲು 30 ಕೋಟಿ ಜನರಿಗೆ ಲಸಿಕೆ ನೀಡಲು ಯೋಜನೆ ರೂಪಿಸಲಾಗಿದೆ.
ಆರೋಗ್ಯ ಕಾರ್ಯಕರ್ತರು, 60 ವರ್ಷಕ್ಕಿಂತ ಮೇಲ್ಪಟ್ಟವರು, 60 ವರ್ಷದೊಳಗಿನ ಅನಾರೋಗ್ಯದಿಂದ ಬಳಲುತ್ತಿರುವ ಮೊದಲು ಕೊರೋನಾ ಲಸಿಕೆ ನೀಡಲಾಗುತ್ತದೆ ಎಂದು ಹೇಳಲಾಗಿದೆ.