ಕೊರೊನಾ ನಿಯಂತ್ರಣಕ್ಕೆ ರಾಜ್ಯಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ದನ್ ಆಂಧ್ರ ಪ್ರದೇಶ, ಆಸ್ಸಾಂ, ಹರಿಯಾಣ, ಹಿಮಾಚಲ ಪ್ರದೇಶ, ಕೇರಳ, ಪಂಜಾಬ್. ರಾಜಸ್ಥಾನ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದ ಆರೋಗ್ಯ ಸಚಿವರ ಜೊತೆ ಸಭೆ ನಡೆಸಿದ್ರು.
ಕೊರೊನಾ ವಿರುದ್ಧ ಹೋರಾಡೋಕೆ ಇಡೀ ದೇಶವೇ ಒಂದಾಗಿದೆ. ಈ 10 ತಿಂಗಳಲ್ಲಿ ಕೊರೊನಾದ ವಿವಿಧ ಹಂತಗಳನ್ನ ನೋಡಿಬಿಟ್ಟಿದ್ದೇವೆ. ಕೇರಳದಲ್ಲಿ ಮೊದಲ ಕೇಸ್ ದಾಖಲಾಗಿತ್ತು. ಇದೀಗ ಕೊರೊನಾ ಜೊತೆಗಿನ ಜೀವನ ಇಲ್ಲಿಗೆ ಬಂದು ನಿಂತಿದೆ ಅಂತಾ ಡಾ. ಹರ್ಷವರ್ಧನ್ ಹೇಳಿದ್ರು.
ಪ್ರಧಾನಿ ಮೋದಿ ನೇತೃತ್ವದಲ್ಲಿ ಕೊರೊನಾ ತಡೆಗೆ ಸಾಕಷ್ಟು ಕ್ರಮಗಳನ್ನ ಕೈಗೊಂಡಿದ್ದೇವೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತಲೂ ಭಾರತವೇ ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದೆ. ಅಲ್ಲದೇ ಭಾರತದಲ್ಲಿ ಕೊರೊನಾ ರಿಕವರಿ ರೇಟ್ 92.56 ಶೇಕಡಾದಷ್ಟಾಗಿದೆ ಅಂತಾ ಹೇಳಿದ್ರು.