alex Certify ಸಮೀಕ್ಷೆಯಲ್ಲಿ ವಲಸೆ ಕಾರ್ಮಿಕರ ಕುರಿತ ಆಘಾತಕಾರಿ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮೀಕ್ಷೆಯಲ್ಲಿ ವಲಸೆ ಕಾರ್ಮಿಕರ ಕುರಿತ ಆಘಾತಕಾರಿ ಮಾಹಿತಿ ಬಹಿರಂಗ

Covid-19 Impact: 21% Rural Households Ready to Send Children to ...

ಕೊರೊನಾ ವೈರಸ್‌ ಸೋಂಕಿನ ವ್ಯಾಪಕ ಹಬ್ಬುವಿಕೆಯನ್ನು ತಡೆಗಟ್ಟಲು ಮಾರ್ಚ್ 24ರಂದು ದೇಶಾದ್ಯಂತ ಲಾಕ್‌ಡೌನ್‌ ಘೋಷಣೆಯಾದ ಸಂದರ್ಭದಲ್ಲಿ ಅತ್ಯಂತ ಹೆಚ್ಚು ಬಾಧೆಗೆ ಒಳಗಾದ ವರ್ಗವೆಂದರೆ ಅದು ವಲಸೆ ಕಾರ್ಮಿಕರದ್ದು.

ಇದೀಗ ಲಾಕ್ ‌ಡೌನ್‌ ಅವಧಿ ಮುಗಿದಿದ್ದು ಪ್ರತಿಯೊಂದು ರಾಜ್ಯವೂ ಸಹ ತಂತಮ್ಮ ಕಾರ್ಮಿಕ ಸಂಬಂಧಿ ಕಾನೂನನ್ನು ಸಡಿಲಿಸಿದ್ದು, ಕಳೆಗುಂದಿದ್ದ ಆರ್ಥಿಕ ಚಟುವಟಿಕೆಗಳಿಗೆ ಮರುಚಾಲನೆ ನೀಡಲು ಮುಂದಾಗಿವೆ.

ಬದುಕು ನಡೆಸಲು ಕೇವಲ ದಿನಗೂಲಿಯನ್ನೇ ನಂಬಿಕೊಂಡಿರುವ ವಲಸೆ ಕಾರ್ಮಿಕರಿಗೆ ಹೇಳಿಕೊಳ್ಳುವಂಥ ಉಳಿತಾಯ ಅಥವಾ ಇತರೆ ಜೀವನೋಪಾಯ ಇಲ್ಲದೇ ಇರುವ ಕಾರಣ, ತಮ್ಮ ಎಂದಿನ ದುಡಿಮೆಗೆ ಮರಳಲು ಉತ್ಸುಕವಾಗಿದೆ.

ನೊಬೆಲ್ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಅವರ Kailash Satyarthi Children’s Foundation ವರದಿ ಪ್ರಕಾರ ಭಾರತದಲ್ಲಿರುವ 21%ನಷ್ಟು ಮನೆಗಳ ಜನರು ತಮ್ಮ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲದ ಕಾರಣ, ತಮ್ಮ ಮಕ್ಕಳನ್ನು ದುಡಿಮೆ ಮಾಡಲು ಕಳಿಸಲು ನಿರ್ಧರಿಸಿದ್ದಾರೆ. ಇದೇ ವೇಳೆ ಲಾಕ್ ‌ಡೌನ್‌ ತಂದಿಟ್ಟ ಆರ್ಥಿಕ ಸಮಸ್ಯೆ ಕಾರಣದಿಂದಾಗಿ ಅನೇಕರು ತಮ್ಮ ಮಕ್ಕಳನ್ನೂ ಮಾರಿಕೊಳ್ಳುವ ಚಿಂತನೆ ನಡೆಸಿದ್ದರು ಎನ್ನಲಾಗಿದೆ.

“A Study on Impact of Lockdown and Economic Disruption on Low-Income Households with Special Reference to Children” ಹೆಸರಿನ ಈ ವರದಿಯು, ಮಕ್ಕಳ ಕಳ್ಳಸಾಗಾಟ ಹೆಚ್ಚಾಗಿರುವ ರಾಜ್ಯಗಳಲ್ಲಿ 50 NGOಗಳ ನೆರವಿನಿಂದ ಸಮೀಕ್ಷೆ ನಡೆಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...