
ಮರಾಠಿಯಲ್ಲಿ ಮೊದಲು ಹರಿದಾಡತೊಡಗಿದ್ದ ಈ ಸಂದೇಶ ಬಳಿಕ ಇತರೆ ಭಾಷೆಗಳಿಗೂ ತರ್ಜುಮೆಗೊಂಡು ವೈರಲ್ ಆಗಿದೆ. ಅಲ್ಲದೇ ಇದನ್ನು ನಂಬಿದ ಸಾರ್ವಜನಿಕರು, ಆರೋಗ್ಯಾಧಿಕಾರಿಗಳು ಕೊರೊನಾ ಸೋಂಕು ತಪಾಸಣೆಗೆ ಬಂದ ವೇಳೆ ಪರೀಕ್ಷೆಗೊಳಪಡಲು ನಿರಾಕರಿಸುತ್ತಿದ್ದಾರೆ. ಅದರಲ್ಲೂ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವಸೈ ನಗರದ ನಿವಾಸಿಗಳು ಈ ಸಂದೇಶ ತೋರಿಸಿ ವಾಗ್ವಾದ ನಡೆಸಿದ್ದು, ಇದು ಅಧಿಕಾರಿಗಳಿಗೆ ಪೇಚಿಗೆ ತಂದೊಡ್ಡಿದೆ. ಈ ಕುರಿತು ಎಷ್ಟೇ ಸಮಜಾಯಿಷಿ ನೀಡಿದರೂ ಅದನ್ನು ಒಪ್ಪಲು ಕೆಲವರು ಸಿದ್ದರಿಲ್ಲ.
ಈ ಹಿನ್ನಲೆಯಲ್ಲಿ The Logical Indian ಫ್ಯಾಕ್ಟ್ ಚೆಕ್ ನಡೆಸಿದ್ದು, ಈ ಸುದ್ದಿಯ ಹಿಂದಿನ ಸತ್ಯವನ್ನು ಬಯಲಿಗೆಳೆದಿದೆ. ವಾಟ್ಸಾಪ್ ಸಂದೇಶದಲ್ಲಿ ಹರಿದಾಡುತ್ತಿರುವಂತೆ ಕೋವಿಡ್ ಪಾಸಿಟಿವ್ ಬಂದ ವ್ಯಕ್ತಿಯ ವೆಚ್ಚವಾಗಿ ಮುನ್ಸಿಪಲ್ ಕಾರ್ಪೋರೇಷನ್ ಗಳಿಗೆ 1.5 ಲಕ್ಷ ರೂಪಾಯಿಗಳನ್ನು ಕೇಂದ್ರ ಸರ್ಕಾರ ನೀಡುತ್ತಿರುವ ವಿಚಾರ ಶುದ್ದ ಸುಳ್ಳು ಎಂಬುದು ತನಿಖೆ ವೇಳೆ ಕಂಡು ಬಂದಿದೆ. ಅಲ್ಲದೇ ಯಾವುದೇ ವ್ಯಕ್ತಿಗೆ ಕೊರೊನಾ ಸೋಂಕು ಇಲ್ಲದಿದ್ದರೂ ಪಾಸಿಟಿವ್ ಎಂದು ಹೇಳಲು ಸಾಧ್ಯವಿಲ್ಲ. ಸೋಂಕು ಇರುವ ಶಂಕೆ ಹೊಂದಿರುವ ವ್ಯಕ್ತಿಗಳ ಸ್ವ್ಯಾಬ್ ಟೆಸ್ಟ್ ನಡೆಸಿದಾಗ ಮಾತ್ರ ಇದು ಖಚಿತಪಡುತ್ತದೆ ಎಂದು ತಿಳಿಸಲಾಗಿದೆ.

https://www.facebook.com/FreePressJournal/videos/588210525418619