alex Certify Good News: ಅವಳಿ ರೂಪಾಂತರಿ ಕೊರೊನಾ ವೈರಸ್​ ವಿರುದ್ಧವೂ ‘ಕೋವ್ಯಾಕ್ಸಿನ್’​ ಪರಿಣಾಮಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Good News: ಅವಳಿ ರೂಪಾಂತರಿ ಕೊರೊನಾ ವೈರಸ್​ ವಿರುದ್ಧವೂ ‘ಕೋವ್ಯಾಕ್ಸಿನ್’​ ಪರಿಣಾಮಕಾರಿ

ದೇಶದಲ್ಲಿ ಕೊರೊನಾ ವೈರಸ್​ ವಿರುದ್ಧ ಬಳಕೆಯಾಗುತ್ತಿರುವ ಕೋವ್ಯಾಕ್ಸಿನ್​ ಲಸಿಕೆಯ ಅವಳಿ ರೂಪಾಂತರಿ ಕೊರೊನಾ ವೈರಸ್​ ವಿರುದ್ಧವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಬುಧವಾರ ಹೇಳಿದೆ.

ಭಾರತ್​ ಬಯೋಟೆಕ್​ ನಿರ್ಮಾಣ ಮಾಡಿದ ಕೋವ್ಯಾಕ್ಸಿನ್​ ಲಸಿಕೆಯನ್ನ ದೇಶದಲ್ಲಿ ಬಳಕೆ ಮಾಡಲು ತುರ್ತು ಅನುಮತಿ ನೀಡಲಾಗಿದೆ. ಅಲ್ಲದೇ ಈ ಲಸಿಕೆಯನ್ನ ವಿದೇಶಗಳಿಗೂ ರಫ್ತು ಮಾಡಲಾಗಿದೆ.

ಐಸಿಎಂಆರ್​ ಅಧ್ಯಯನದಲ್ಲಿ ಕೋವ್ಯಾಕ್ಸಿನ್​ ಲಸಿಕೆಯು ಅವಳಿ ರೂಪಾಂತರಿ ಕೊರೊನಾ ವೈರಸ್​ನ್ನು ತಟಸ್ಥಗೊಳಿಸುವ ಶಕ್ತಿ ಹೊಂದಿದೆ ಎಂದು ಅಂಶ ತಿಳಿದುಬಂದಿದೆ ಅಂತಾ ಐಸಿಎಂಆರ್ ಟ್ವೀಟ್​ ಮಾಡಿದೆ.

ಐಸಿಎಂಆರ್​ನ ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಆಫ್​ ವೈರಾಲಜಿ ವಿಭಾಗವು ರೂಪಾಂತರಿ ವೈರಸ್​ಗಳಾದ ಬ್ರಿಟನ್​ನ B.1.1.7, ಬ್ರೆಜಿಲ್​ನ B.1.1.28 ಹಾಗೂ ದಕ್ಷಿಣ ಆಫ್ರಿಕಾದ B.1.351 ವೈರಸ್​ಗಳನ್ನ ಪ್ರತ್ಯೇಕಿಸಿದೆ. ಈ ಎಲ್ಲಾ ರೂಪಾಂತರಿಗಳ ವಿರುದ್ಧವೂ ಕೋವ್ಯಾಕ್ಸಿನ್​ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದು ಐಸಿಎಂಆರ್​ ಹೇಳಿದೆ.

ಕೋವ್ಯಾಕ್ಸಿನ್​ ಅವಳಿ ರೂಪಾಂತರಿ ವಿರುದ್ಧವೂ ಪರಿಣಾಮಕಾರತ್ವ ಹೊಂದಿದೆ ಎಂದು ಐಸಿಎಂಆರ್ ಸ್ಪಷ್ಟಪಡಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...