ಕೊರೊನಾ ವೈರಸ್ ವಿರುದ್ಧ ಲಸಿಕೆ ಅಭಿಯಾನ ಭಾರತದಲ್ಲಿ ಚುರುಕು ಪಡೆದಿದೆ. ಪ್ರಧಾನಿ ನರೇಂದ್ರ ಮೋದಿ, ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಲಸಿಕೆ ನೀಡುವ ಘೋಷಣೆ ಮಾಡಿದ್ದಾರೆ. ಈ ಮಧ್ಯೆ ಕೊವ್ಯಾಕ್ಸಿನ್ ಲಸಿಕೆ ಪಡೆದ ಜನರಿಗೆ ಖುಷಿ ಸುದ್ದಿ ಸಿಕ್ಕಿದೆ. ಭಾರತ ಲಸಿಕೆ ಕೊವಾಕ್ಸಿನ್ ಬಗ್ಗೆ ಬ್ರೆಜಿಲ್ ರಾಷ್ಟ್ರೀಯ ಆರೋಗ್ಯ ಮಾನಿಟರಿಂಗ್ ಏಜೆನ್ಸಿ ಒಳ್ಳೆಯ ಸುದ್ದಿ ನೀಡಿದೆ. ಅನಿಸಾ, ಕೊವಾಕ್ಸಿನ್ ಲಸಿಕೆಯನ್ನು ಅನುಮೋದಿಸಿದೆ.
ಕೊವಾಕ್ಸಿನ್ ಪಡೆದವರಿಗೆ ಈ ವರ್ಷ ಸೆಪ್ಟೆಂಬರ್ ವೇಳೆಗೆ ವಿದೇಶಕ್ಕೆ ಹೋಗುವ ದಾರಿ ತೆರೆಯಲಿದೆ. ತುರ್ತು ಲಸಿಕೆ ಬಳಕೆಗೆ ಅನುಮೋದನೆ ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆಗೆ ಅರ್ಜಿ ಸಲ್ಲಿಸಲಾಗಿದ್ದು, ಜುಲೈ-ಸೆಪ್ಟೆಂಬರ್ ಒಳಗೆ ಅನುಮೋದನೆ ನಿರೀಕ್ಷಿಸಲಾಗಿದೆ.
ಯುನೈಟೆಡ್ ಸ್ಟೇಟ್ಸ್, ಬ್ರೆಜಿಲ್, ಹಂಗೇರಿ ಸೇರಿದಂತೆ 60 ಕ್ಕೂ ಹೆಚ್ಚು ದೇಶಗಳಲ್ಲಿ ಅನುಮೋದನೆ ಪ್ರಕ್ರಿಯೆ ನಡೆಯುತ್ತಿದೆ. 13 ದೇಶಗಳಲ್ಲಿ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದ್ದು, ಇನ್ನೂ ಹಲವು ದೇಶಗಳು ಇದಕ್ಕೆ ಶೀಘ್ರವೇ ಸೇರಲಿವೆ.