alex Certify ಕೋವಿಡ್ ನಿರ್ಬಂಧ ತಪ್ಪಿಸಲು 2 ರಾಜ್ಯಗಳ ಸಂಪರ್ಕಿಸುವ ಸೇತುವೆ ಮೇಲೆ ಮದುವೆ ಮಾಡಿಕೊಂಡ ನವಜೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ನಿರ್ಬಂಧ ತಪ್ಪಿಸಲು 2 ರಾಜ್ಯಗಳ ಸಂಪರ್ಕಿಸುವ ಸೇತುವೆ ಮೇಲೆ ಮದುವೆ ಮಾಡಿಕೊಂಡ ನವಜೋಡಿ

ಜುಗಾಡ್‌ ವಿವಾಹಗಳು ಸದ್ಯದ ಮಟ್ಟಿಗೆ ದೊಡ್ಡ ಥೀಮ್ ಆಗಿಬಿಟ್ಟಿವೆ. ಕಳೆದ ಒಂದು ವರ್ಷದಿಂದ ಕೋವಿಡ್-19 ಸಾಂಕ್ರಮಿಕದ ಕಾರಣದಿಂದ ಸಾಂಪ್ರದಾಯಿಕ ಮದುವೆಗಳು ನಡೆಯುವ ರೀತಿಯೇ ಬದಲಾಗಿಬಿಟ್ಟಿವೆ. ಕ್ವಾರಂಟೈನ್ ಹಾಗೂ ಸಾಮಾಜಿಕ ಅಂತರದ ಕಾರಣದಿಂದ ಜಗತ್ತಿನಾದ್ಯಂತ ಜೋಡಿಗಳು ’ಶಾರ್ಟ್‌ಕಟ್‌’ ಮದುವೆಗಳಿಗೆ ಮೊರೆ ಹೋಗುತ್ತಿದ್ದಾರೆ. ಸೀಮಿತ ಸಂಖ್ಯೆಯಲ್ಲಿ ಜನರನ್ನು ಆಹ್ವಾನಿಸುವುದು ಅಥವಾ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಮದುವೆಯಾಗುವುದು ಹೊಸ ಅಭ್ಯಾಸವಾಗಿಬಿಟ್ಟಿದೆ.

ಕೋವಿಡ್ ನಿರ್ಬಂಧಗಳ ಕಾರಣ ಅನೇಕರು ತಮ್ಮ ಮದುವೆ ಕಾರ್ಯಕ್ರಮಗಳನ್ನು ಮುಂದೂಡುತ್ತಿದ್ದಾರೆ. ಮಧುರೈನ ಜೋಡಿಯೊಂದು ಕೋವಿಡ್ ನಿರ್ಬಂಧಗಳನ್ನು ಮೆಟ್ಟಿ ನಿಂತು ವಿಮಾನದಲ್ಲಿ ಮದುವೆ ಮಾಡಿಕೊಂಡಿದ್ದರು.

ಹೊಸ ಸಂಶೋಧನೆ: ಜನ ಪೋರ್ನ್ ಇಷ್ಟಪಡುವ ಸಾಮಾನ್ಯ ಕಾರಣ ಬಹಿರಂಗ, ಇಲ್ಲಿದೆ ಸಂಪೂರ್ಣ ಮಾಹಿತಿ

ಮದುರೈನಿಂದ ಬೆಂಗಳೂರಿಗೆ ಎರಡು ಗಂಟೆಗಳ ಫ್ಲೈಟ್‌ ಏರಿದ ಈ ಜೋಡಿ ಆಗಸದಲ್ಲೇ ತಮ್ಮ ಕುಟುಂಬಸ್ಥರೊಂದಿಗೆ ಮದುವೆ ಮಾಡಿಕೊಂಡಿದೆ. ವಿಮಾನವನ್ನು ಮದುಮಗಳ ತಂದೆ ಬುಕ್ ಮಾಡಿದ್ದರು. ಇಡೀ ಕಾರ್ಯಕ್ರಮದ ವಿಡಿಯೋ ವೈರಲ್ ಆಗಿದ್ದು, ನವಜೋಡಿಗಳು ಒಂದು ಸೀಟ್‌ನಲ್ಲಿ ಕುಳಿತಿದ್ದರೆ ಸಮಾರಂಭಕ್ಕೆ ಬಂದಿದ್ದ ಮಿಕ್ಕ ಮಂದಿಯೆಲ್ಲ ಉಳಿದ ಸೀಟುಗಳ ಮೇಲೆ ಕುಳಿತಿರುವುದನ್ನು ಇಲ್ಲಿ ನೋಡಬಹುದಾಗಿದೆ.

ಎಸ್ಮಾ ಜಾರಿಗೊಳಿಸಿದ ಯೋಗಿ ಸರ್ಕಾರ: ಯಾರನ್ನೂ ಬೇಕಾದ್ರೂ ಬಂಧಿಸಲು ಪೊಲೀಸರಿಗೆ ಅಧಿಕಾರ -6 ತಿಂಗಳು ಮುಷ್ಕರ, ಪ್ರತಿಭಟನೆ ನಿಷೇಧ

ಇದಕ್ಕಿಂತ ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಮತ್ತೊಂದು ಜೋಡಿ ತಮಿಳುನಾಡು ಹಾಗೂ ಕೇರಳ ರಾಜ್ಯಗಳನ್ನು ಸಂಪರ್ಕಿಸುವ ಸೇತುವೆಯೊಂದರ ಮೇಲೆ ನಿಂತು ಗೃಹಸ್ಥಾಶ್ರಮ ಪ್ರವೇಶಿಸಿದ್ದಾರೆ. ಚಿನ್ನಾರ್‌ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಸೇತುವೆಯ ಮೇಲೆ ಲಾಕ್‌ಡೌನ್ ಆದಾಗಿನಿಂದ ಇದುವರೆಗೂ 11 ಮದುವೆಗಳು ಘಟಿಸಿವೆ.

ಕೇರಳದ ಮರಯೂರ್‌ ಇಡುಕ್ಕಿಯ ಉನ್ನಿಕೃಷ್ಣನ್ ಹಾಗೂ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ಬಟ್ಲಗುಂಡುವಿನ ತಂಗಮಾಯಿಳ್‌ರನ್ನು ವರಿಸಿದ್ದು, ಈ ಸೇತುವೆ ಮೇಲೆ ಇಬ್ಬರ ಮದುವೆಯನ್ನು ನೆರವೇರಿಸಲಾಗಿದ್ದು, ಇದೇ ವೇಳೆ ವಧೂವರರ ಕುಟುಂಬಸ್ಥರು ಸಾಕ್ಷಿಯಾಗಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...