ಉತ್ತರ ಪ್ರದೇಶ ರಾಜಧಾನಿ ಲಖ್ನೋದ ಕೃಷ್ಣ ನಗರದ ಹೋಟೆಲ್ ವೊಂದರ ಕೊಠಡಿಯಲ್ಲಿ ಯುವ ಜೋಡಿ ಮೃತದೇಹ ಕಂಡು ಬಂದಿದೆ.
ಹೋಟೆಲ್ ಸಿಬ್ಬಂದಿ ಯುವಜೋಡಿಯ ಮೃತದೇಹವನ್ನು ಗಮನಿಸಿದ ನಂತರ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಎಸಿಪಿ ದೀಪಕ್ ಕುಮಾರ್ ತಿಳಿಸಿದ್ದಾರೆ. ರಾಹುಲ್ ಹಾಗೂ ನ್ಯಾನ್ಸಿ ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಹಾಸಿಗೆ ಮೇಲೆ ನ್ಯಾನ್ಸಿಯ ಶವ ಪತ್ತೆಯಾಗಿದ್ದು, ರಾಹುಲ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನ್ಯಾನ್ಸಿಗೆ ರಾಹುಲ್ ಆಮಿಷವೊಡ್ಡಿರುವುದಾಗಿ ಆಕೆಯ ಕುಟುಂಬ ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಮೃತದೇಹಗಳು ಕಂಡು ಬಂದ ನಂತರ ಇಬ್ಬರೂ ಕುಟುಂಬದವರಿಗೆ ಮಾಹಿತಿ ನೀಡಲಾಗಿದ್ದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಎರಡೂ ಕುಟುಂಬದವರು ಮತ್ತು ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗಿದೆ. ನಾಲ್ಕು ವರ್ಷಗಳಿಂದ ಇಬ್ಬರು ಪ್ರೀತಿಸಿದ್ದರು ಎನ್ನುವುದು ತಿಳಿದುಬಂದಿದೆ. ತನಿಖೆ ಮುಂದುವರೆಸಲಾಗಿದೆ ಎಂದು ದೀಪಕ್ ಕುಮಾರ್ ಹೇಳಿದ್ದಾರೆ.