ಹೊಸ ವರ್ಷ, ಹಬ್ಬಕ್ಕೆ ಚೆನ್ನಾಗಿ ಎಣ್ಣೆ ಹೊಡೆದು ಬೈಕ್, ಕಾರಲ್ಲಿ ರೌಂಡ್ಸ್ ಹಾಕೋ ಪ್ಲಾನ್ ಇದೆಯಾ..? ಹಾಗಾದ್ರೆ ನೈಟ್ ಕರ್ಫ್ಯೂ ಆದೇಶ ಉಲ್ಲಂಘನೆ ಜೊತೆಗೆ ಡ್ರಂಕ್ & ಡ್ರೈವ್ ಕೇಸ್ ನಿಮ್ಮ ಮೇಲೆ ಬೀಳೋದು ಪಕ್ಕಾ.
ಕೊರೊನಾದಿಂದಾಗಿ ಬ್ರೀತ್ ಅನಲೈಸರ್ ಬಳಕೆ ಕಡಿಮೆ ಮಾಡಿರುವ ದೇಶದ ವಿವಿಧ ರಾಜ್ಯಗಳ ಪೊಲೀಸರು ಡ್ರಂಕ್ & ಡ್ರೈವ್ ಪತ್ತೆಗೆ ಹೊಸ ಮಾರ್ಗಗಳನ್ನ ಕಂಡು ಹಿಡಿದಿದ್ದಾರೆ.
ಪಶ್ಚಿಮ ಬಂಗಾಳದ ಕೊಲ್ಕತ್ತಾ ಪೊಲೀಸರು ಪಾನಮತ್ತರಾಗಿದ್ದಾರೆ ಎಂಬ ಅನುಮಾನ ಬಂದರೆ ಬೆರಳು ಲೆಕ್ಕ ಹಾಕುವಂತೆ ಇಲ್ಲವೇ ನೇರವಾಗಿ ನಡೆಯುವಂತೆ ಹೇಳುತ್ತಾರೆ. ಇವೆರಡರಲ್ಲಿ ಒಂದು ಪರೀಕ್ಷೆಯಲ್ಲಿ ನೀವು ಫೇಲ್ ಆದರೆ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮದ್ಯಪಾನ ಸೇವನೆ ಪರೀಕ್ಷೆ ಮಾಡುತ್ತಾರೆ.
ಗುಜರಾತ್ನಲ್ಲಿ ಪೊಲೀಸರು ನಿಮ್ಮ ಕಣ್ಣಿನ ಬಣ್ಣವನ್ನ ನೋಡಿ ನೀವು ಎಣ್ಣೆ ಹೊಡೆದಿದ್ದೀರಾ ಇಲ್ಲವಾ ಅನ್ನೋದನ್ನ ನಿರ್ಧರಿಸುತ್ತಾರಂತೆ. ಕಣ್ಣು ಕೆಂಪಗಾಗಿದ್ದು ಕಂಡು ಬಂದರೆ ಅಂತವರನ್ನ ಡ್ರಂಕ್ & ಡ್ರೈವ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದರ ಜೊತೆಯಲ್ಲಿ ಉಸಿರಾಡುವಂತೆ ಹೇಳುವ ಮೂಲಕವೂ ಮದ್ಯದ ವಾಸನೆಯನ್ನ ಪತ್ತೆ ಹಚ್ಚಲಾಗುತ್ತೆ.