alex Certify ಹಣ್ಣು ತಿಂದರೆ ಕಡಿಮೆಯಾಗುತ್ತಾ ಕೊರೊನಾ..? ಫೇಸ್ ​ಬುಕ್ ಪೋಸ್ಟ್​ನ ಅಸಲಿಯತ್ತು ಫ್ಯಾಕ್ಟ್‌ ಚೆಕ್‌ ನಲ್ಲಿ ಬಯಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣ್ಣು ತಿಂದರೆ ಕಡಿಮೆಯಾಗುತ್ತಾ ಕೊರೊನಾ..? ಫೇಸ್ ​ಬುಕ್ ಪೋಸ್ಟ್​ನ ಅಸಲಿಯತ್ತು ಫ್ಯಾಕ್ಟ್‌ ಚೆಕ್‌ ನಲ್ಲಿ ಬಯಲು

ಕೊರೊನಾ ವೈರಸ್​ ಸಾಂಕ್ರಾಮಿಕ ಶುರುವಾದಾಗಿನಿಂದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುಳ್ಳು ವದಂತಿಗಳು ಹರಿದಾಡುತ್ತಲೇ ಇದೆ. ಕೋವಿಡ್​ 19ನ್ನು ಹೋಗಲಾಡಿಸಲು ಹೀಗೆ ಮಾಡಿ ಹಾಗೆ ಮಾಡಿ ಅಂತಾ ಸಾಕಷ್ಟು ಸುಳ್ಳು ಮಾಹಿತಿಯನ್ನ ನೀಡಲಾಗ್ತಿದೆ. ಈ ಮಾತಿಗೆ ಸಾಕ್ಷಿ ಎಂಬಂತೆ ಮಾವಿನ ಹಣ್ಣು, ಕಿತ್ತಳೆ ಹಣ್ಣು, ನಿಂಬು ಹಾಗೂ ಅನಾನಸ್​ನಂತಹ ಅಲ್ಕಲಿನ್​ ಅಂಶಗಳುಳ್ಳ ಹಣ್ಣನ್ನ ಸೇವಿಸಿದ್ರೆ ಕೊರೊನಾ ರೋಗವನ್ನ ಹೋಗಲಾಡಿಸಬಹುದು ಎಂಬ ಸುಳ್ಳು ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿತ್ತು.

ಫೇಸ್​ಬುಕ್​ ಹಾಗೂ ವಾಟ್ಸಾಪ್​​ನಲ್ಲಿ ಶೇರ್​ ಮಾಡಲಾದ ಈ ಸಂದೇಶ ಸುಳ್ಳು ಎಂದು ಫ್ಯಾಕ್ಟ್ ​ಚೆಕ್​ ಹೇಳಿದೆ. ಈ ಬಗ್ಗೆ ಈಗಾಗಲೇ ವಿಶ್ವ ಸಂಸ್ಥೆ ಮಾಹಿತಿ ನೀಡಿದ್ದು, ಕೆಮ್ಮುವ ಹಾಗೂ ಸೀನುವ ಮೂಲಕ ಮಾತ್ರ ಕೊರೊನಾ ವೈರಸ್​ ಹರಡುತ್ತೆ. ಅದೇ ರೀತಿ ಅಲ್ಕಲೈನ್​ಯುಕ್ತ ಹಣ್ಣನ್ನು ಸೇವಿಸಿದ ಮಾತ್ರಕ್ಕೆ ದೇಹದ ಪಿಹೆಚ್​ ಮಟ್ಟದಲ್ಲಿ ಯಾವುದೇ ಬದಲಾವಣೆ ಆಗೋದಿಲ್ಲ ಎಂದು ಹೇಳಿದೆ.

ಇನ್ನು ಈ ಮೆಸೇಜ್​ನಲ್ಲಿ ನೀಡಲಾದ ಹಣ್ಣುಗಳ ಪಿಹೆಚ್​ ಮಟ್ಟ ಕೂಡ ತಪ್ಪಾಗಿದೆ. ಯಾವ್ಯಾವ ಹಣ್ಣುಗಳಲ್ಲಿ ಪಿಹೆಚ್​ ಮಟ್ಟ ಎಷ್ಟಿದೆ ಅನ್ನೋದಕ್ಕೆ ಇಲ್ಲಿದೆ ಮಾಹಿತಿ :

ಹಣ್ಣುಗಳು              ಪಿಹೆಚ್​ ಮಟ್ಟ
ಬಾಳೆಹಣ್ಣು             4.5 – 4.7
ನಿಂಬೆಹಣ್ಣು             2.2-2-4
ಅವಕಾಡೋ           6.3 – 6.6
ಬೆಳ್ಳುಳ್ಳಿ                     5.8
ಮಾವಿನಹಣ್ಣು         5.8 – 6.0
ಕಿತ್ತಳೆ ಹಣ್ಣು            3.0 – 4.0
ಅನಾನಸ್​              3.20-4.00

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...