ಕೊರೊನಾ ವಿರುದ್ಧದ ಒಂದು ವರ್ಷಗಳ ಹೋರಾಟದ ಬಳಿಕ ಇದೀಗ ದೇಶದಲ್ಲಿ ಕೊರೊನಾ ಲಸಿಕೆ ಬಳಕೆಗೆ ಹಸಿರು ನಿಶಾನೆ ತೋರಿಸಲಾಗಿದೆ. ಪ್ರಧಾನಿ ಮೋದಿ ಸೂಚನೆಯಂತೆ ದೇಶದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದ ಲಸಿಕೆಯನ್ನ ನೀಡಲಾಗುತ್ತಿದೆ.
ಭಾರತದಲ್ಲಿ ಎರಡು ಲಸಿಕೆಗಳ ಬಳಕೆಗೆ ತುರ್ತು ಅನುಮೋದನೆ ನೀಡಲಾಗಿದೆ. ಆಕ್ಸ್ಫರ್ಡ್ ಹಾಗೂ ಆಸ್ಟ್ರೇಜೆನಿಕಾ ಅಭಿವೃದ್ಧಿ ಪಡಿಸಿರುವ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ದೇಶದಲ್ಲಿ ಬಳಕೆಯಾಗುತ್ತಿದೆ. ಈ ಎರಡೂ ಲಸಿಕೆಗಳನ್ನ ಕನಿಷ್ಟ 28 ದಿನಗಳ ಅಂತರದಲ್ಲಿ 2 ಡೋಸ್ಗಳ ರೀತಿಯಲ್ಲಿ ನೀಡಲಾಗುತ್ತದೆ.
ಕೊರೊನಾ ವಿರುದ್ಧ ಅಭಿವೃದ್ಧಿ ಪಡಿಸಲಾಗಿರುವ ಈ ಲಸಿಕೆಗಳನ್ನ ಯಾರೂ ಬೇಕಿದ್ದರೂ ಪಡೆಯಬಹುದಾ ಎಂಬ ಗೊಂದಲ ಬಹುತೇಕರಲ್ಲಿದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.
ಗರ್ಭಿಣಿಯರು ಹಾಗೂ ಬಾಣಂತಿಯರು ಈ ಲಸಿಕೆಗಳನ್ನ ಪಡೆಯುವಂತಿಲ್ಲ.
ಅಲರ್ಜಿಯ ಸಮಸ್ಯೆಯನ್ನ ಹೊಂದಿರುವವರಿಗೆ ಈ ಲಸಿಕೆಯನ್ನ ನೀಡಲಾಗುವುದಿಲ್ಲ.
ಇಂಜೆಕ್ಷನ್ ಬಳಿಕ ಅಲರ್ಜಿ ಸಮಸ್ಯೆ ಅನುಭವಿಸುತ್ತಿರುವವರಿಗೂ ಈ ಲಸಿಕೆ ನೀಡಲಾಗಲ್ಲ.
ರಕ್ತ ಹೆಪ್ಪುಗಟ್ಟುವಿಕೆ ವಿಚಾರದಲ್ಲಿ ಸಮಸ್ಯೆ ಉಳ್ಳವರಿಗೆ ವಿಶೇಷ ಕಾಳಜಿ ಬಳಿಕ ನೀಡಬಹುದು.
ಈಗಾಗಲೇ ಬೇರೆ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರೆ ಅವರಿಗೆ ಲಸಿಕೆ ನೀಡುವ ಸಾಧ್ಯತೆ ಕಡಿಮೆ.