ಹರಿಯಾಣದ ರೋಹ್ಟಕ್ ವೈದ್ಯಕೀಯ ವಿಜ್ಞಾನ ಸ್ನಾತಕೋತ್ತರ ಇನ್ಸ್ಟಿಟ್ಯೂಟ್ ನಲ್ಲಿ ಕೊರೊನಾ ವೈರಸ್ ಲಸಿಕೆ ಕೊವ್ಯಾಕ್ಸಿನ್ ಮೊದಲ ಹಂತದ ಪರೀಕ್ಷೆ ಪೂರ್ಣಗೊಂಡಿದ್ದು ಪ್ರೋತ್ಸಾಹದಾಯಕ ಫಲಿತಾಂಶ ಕಂಡುಬಂದಿದೆ.
ಕೊರೊನಾ ವೈರಸ್ ಲಸಿಕೆ ಮಾನವ ಪ್ರಯೋಗದ ಮೊದಲ ಭಾಗ ಪೂರ್ಣಗೊಂಡಿದೆ ಎಂದು ಪ್ರಯೋಗ ತಂಡದ ಪ್ರಧಾನ ತನಿಖಾಧಿಕಾರಿ ಡಾ. ಸವಿತಾ ಶರ್ಮಾ ಮಾಹಿತಿ ನೀಡಿದ್ದಾರೆ.
ರೋಹ್ಟಕ್ ವೈದ್ಯಕೀಯ ವಿಜ್ಞಾನ ಸ್ನಾತಕೋತ್ತರ ಇನ್ಸ್ಟಿಟ್ಯೂಟ್ ಸೇರಿದಂತೆ ಐಸಿಎಂಆರ್ ದೇಶಾದ್ಯಂತ ಆಯ್ಕೆ ಮಾಡಿದ್ದ 12 ಸ್ಥಳಗಳಲ್ಲಿ 50 ಸ್ವಯಂಸೇವಕರ ಮೇಲೆ ಲಸಿಕೆ ಪ್ರಯೋಗ ಮಾಡಲಾಗಿದ್ದು ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ.
ಒಂದನೇ ಹಂತದ ಪ್ರಯೋಗಗಳ ಎರಡನೇ ಭಾಗಕ್ಕೆ ಆರು ಜನರಿಗೆ ನೇತೃತ್ವ ವಹಿಸಲಾಗಿದೆ. ಪರೀಕ್ಷೆಯ ಮೊದಲ ಹಂತದ ಫಲಿತಾಂಶ ಉತ್ತೇಜನಕಾರಿಯಾಗಿದೆ ಎಂದು ಹೇಳಿದ್ದಾರೆ.
ಭಾರತ್ ಬಯೋಟೆಕ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಸಹಯೋಗದಲ್ಲಿ ಕೊವ್ಯಾಕ್ಸಿನ್ ತಯಾರಿಸಲಾಗಿದ್ದು, ದೇಶಾದ್ಯಂತ 12 ಸ್ಥಳಗಳಲ್ಲಿ ಲಸಿಕೆಯ ಮಾನವ ಕ್ಲಿನಿಕಲ್ ಪ್ರಯೋಗ ಯಶಸ್ವಿಯಾಗಿ ಮುಂದುವರೆದಿದೆ.