ದೇಶದಲ್ಲಿ ಕೊರೊನಾ ಎರಡನೇ ಅಲೆ ಜಾರಿಯಲ್ಲಿದೆ. ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಕೊರೊನಾ ಅಲೆ ಯುವಕರನ್ನು ಹೆಚ್ಚು ಕಂಗೆಡಿಸಿದೆ. ಕಳೆದ ವರ್ಷ ಕೊರೊನಾದ ಮೊದಲ ಅಲೆ ವಯಸ್ಸಾದವರನ್ನು ಕಂಗೆಡಿಸಿತ್ತು.
ಜುಲೈನಲ್ಲಿ ಕೊರೊನಾದ ಮೂರನೇ ಅಲೆ ಶುರುವಾಗಲಿದೆ. ಈ ಮೂರನೇ ಅಲೆ ಚಿಕ್ಕ ಮಕ್ಕಳಿಗೆ ಹೆಚ್ಚು ಅಪಾಯಕಾರಿಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೊರೊನಾ ಮೂರನೇ ಅಲೆ ಹೆಚ್ಚು ಅಪಾಯಕಾರಿಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಕೊರೊನಾ ವೈರಸ್ ಮೂರನೇ ಅಲೆ ಮಹಾರಾಷ್ಟ್ರದಿಂದ ಪ್ರಾರಂಭವಾಗಲಿದೆ. ಆದ್ರೆ ಅದು ಯಾವಾಗ ಪ್ರಾರಂಭವಾಗುತ್ತದೆ ಎಂಬುದರ ಕುರಿತು ತಜ್ಞರು ಸ್ಪಷ್ಟವಾದ ಮಾಹಿತಿ ನೀಡಿಲ್ಲ. ಮೂರನೇ ಅಲೆ ಜುಲೈನಿಂದ ಸೆಪ್ಟೆಂಬರ್ ಒಳಗೆ ಪ್ರಾರಂಭವಾಗಬಹುದು. ಇದು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಅಂದಾಜಿಸಲಾಗ್ತಿದೆ.
ಈ ವರದಿಯನ್ನು ಆಧರಿಸಿ ಮಹಾರಾಷ್ಟ್ರದಲ್ಲಿ ಈಗಿನಿಂದಲೇ ತಯಾರಿ ಶುರುವಾಗಿದೆ. ಮಕ್ಕಳ ಕೊರೊನಾ ಸೆಂಟರ್ ತೆಗೆಯುವ ವ್ಯವಸ್ಥೆ ಮಾಡಲಾಗ್ತಿದೆ. ಮಕ್ಕಳಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗ್ತಿದೆ. ಮುಂದಿನ ಎರಡು ತಿಂಗಳಲ್ಲಿ ಮಕ್ಕಳ ಕೋವಿಡ್ ವಾರ್ಡ್ ತಯಾರಾಗಲಿದೆ ಎಂದು ಬಿಎಂಸಿ ಹೇಳಿದೆ.