ನವದೆಹಲಿ: ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳನ್ನು ಆರಂಭಿಸುವುದು ಸದ್ಯಕ್ಕೆ ಕಷ್ಟಸಾಧ್ಯವಾಗಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಇನ್ನೂ ಆರಂಭವಾಗದ ಹಿನ್ನೆಲೆಯಲ್ಲಿ ಆನ್ಲೈನ್ ಮೂಲಕ ಪಾಠ ಪ್ರವಚನ ನಡೆಯುತ್ತಿವೆ. ಸಿಬಿಎಸ್ಇ ಮತ್ತು ಐಸಿಎಸ್ಇ ಮಂಡಳಿಗಳು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 10 ಮತ್ತು 12ನೇ ತರಗತಿ ಪಠ್ಯ ಕ್ರಮದಲ್ಲಿ ಶೇಕಡ 50 ರಷ್ಟು ಕಡಿಮೆ ಮಾಡಲು ಚಿಂತನೆ ನಡೆಸಿದೆ.
ಎಂದಿನಂತೆ ತರಗತಿ ನಡೆಸಲು ಈ ವರ್ಷ ಕೊರೋನಾ ಅವಕಾಶ ನೀಡದ ಕಾರಣದಿಂದ ಈಗಾಗಲೇ ಶೇಕಡ 30 ರಷ್ಟು ಪಠ್ಯ ಕಡಿತಗೊಳಿಸಲಾಗಿದೆ. ಶೇಕಡ 50 ರಷ್ಟು ಅಥವಾ ಶೇಕಡ 70 ರಷ್ಟು ಪಠ್ಯಾಧಾರಿತ ಪರೀಕ್ಷೆಗಳನ್ನು ನಡೆಸಬೇಕೇ? ಎನ್ನುವ ಕುರಿತು ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುತ್ತದೆ. ಮೂಲಗಳ ಪ್ರಕಾರ ಶೇಕಡ 50ರಷ್ಟು ಪಠ್ಯ ಕಡಿತಕ್ಕೆ ಚಿಂತನೆ ನಡೆದಿದೆ. ಕೊರೋನಾ ಹೀಗೆ ಮುಂದುವರೆದಲ್ಲಿ ಶೈಕ್ಷಣಿಕ ವರ್ಷ ವಿಸ್ತರಣೆ ಮಾಡುವ ಇಲ್ಲವೇ ಎಲ್ಲರನ್ನೂ ಪಾಸ್ ಮಾಡುವುದು ಸೇರಿದಂತೆ ಹಲವು ಸಾಧ್ಯತೆಗಳ ಕುರಿತಾಗಿ ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.