ನವದೆಹಲಿ: ಕೊರೋನಾ ಸೋಂಕು ತಡೆಯಲು ಲಸಿಕೆ ಕಂಡು ಹಿಡಿಯುವ ಪ್ರಯೋಗಗಳು ಮುಂದುವರೆದಿದೆ. ಈಗಾಗಲೇ ಅನೇಕ ಪ್ರಯೋಗ ಯಶಸ್ವಿಯಾಗಿದ್ದು ಅಂತಿಮ ಹಂತದ ಪ್ರಯೋಗ ಪರೀಕ್ಷೆ ಫಲಿತಾಂಶ ಬಾಕಿ ಇದೆ.
ಇದೇ ಸಂದರ್ಭದಲ್ಲಿ ಕೊರೋನಾ ಸೋಂಕಿತರಿಗೆ ನೀಡಲು ಬಳಸುವ ಫೆವಿಪಿರವಿರ್ ಮಾತ್ರೆಯನ್ನು ಭಾರತದಲ್ಲಿ ಉತ್ಪಾದಿಸಿ ಮಾರಾಟ ಮಾಡಲು ಮೂರು ಕಂಪನಿಗಳಿಗೆ ಭಾರತೀಯ ಔಷಧ ನಿಯಂತ್ರಣಾ ಮಹಾನಿರ್ದೇಶನಾಲಯ ಅನುಮೋದನೆ ನೀಡಿದೆ.
ಫೆವಿಪಿರವಿರ್ ಮಾತ್ರೆಯನ್ನು ಸೋಂಕಿತರಿಗೆ ನೀಡಲು ಭಾರತ ಸರ್ಕಾರ ನೀಡಲು ಅನುಮತಿ ನೀಡಿದೆ. ಸಿಪ್ಲಾ ಸೆಂಪ್ಲೆಂಜಾ ಹೆಸರಲ್ಲಿ ಆಗ್ಸ್ ಮೊದಲ ವಾರ ಬಿಡುಗಡೆ ಮಾಡಲಿರುವ ಮಾತ್ರೆಗೆ 68 ರೂಪಾಯಿ ದರ ನಿಗದಿ ಮಾಡಿದೆ.
ಜೆನ್ ಓರ್ಕ್ಸ್ ಫಾರ್ಮಸ್ಯುಟಿಕಲ್ ಕಂಪನಿ ಬ್ರಿಟನ್ ಫಾರ್ಮಸಿಟಿಕಲ್ ಕಂಪನಿ ಫವಿವೆಂಟ್ ಹೆಸರಲ್ಲಿ ಮಾತ್ರೆ ಬಿಡುಗಡೆ ಮಾಡಲಿದ್ದು 39 ರೂಪಾಯಿ ದರ ನಿಗದಿಪಡಿಸಿದೆ. ಬ್ರಿನ್ ಟನ್ ಫಾರ್ಮಾಸ್ಯುಟಿಕಲ್ ಕಂಪನಿ ಫವಿಟನ್ ಹೆಸರಲ್ಲಿ ಮಾತ್ರೆ ಬಿಡುಗಡೆ ಮಾಡಲಿದ್ದು 59 ರೂ. ದರ ನಿಗದರಿ ಮಾಡಿದೆ.