ನವದೆಹಲಿ: ವಾಸನೆ, ರುಚಿ ಗ್ರಹಿಕೆ ಸಾಧ್ಯವಾಗದಿದ್ದಲ್ಲಿ ಕೊರೊನಾ ತಗುಲಿರುವ ಸಾಧ್ಯತೆ ಇದೆ. ವಾಸನೆ ಮತ್ತು ನಾಲಿಗೆ ರುಚಿ ಗುರುತಿಸಲು ಸಾಧ್ಯವಾಗದಿದ್ದರೆ ಕೊರೋನಾ ಲಕ್ಷಣಗಳಲ್ಲಿ ಒಂದು ಎಂದು ಕೇಂದ್ರ ಸರ್ಕಾರ ಹೇಳಿದ್ದು, ಕೊರೋನಾ ಹೊಸ ಲಕ್ಷಣಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.
ಅನಿರೀಕ್ಷಿತವಾಗಿ ವಾಸನೆ ಮತ್ತು ರುಚಿ ಗ್ರಹಿಕೆಯ ಸಾಮರ್ಥ್ಯ ಕಳೆದುಕೊಳ್ಳುವುದನ್ನು ಕೊರೋನಾ ಲಕ್ಷಣಗಳಲ್ಲಿ ಒಂದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕೊರೋನಾದ ಲಕ್ಷಣಗಳಲ್ಲಿ ರುಚಿ ಮತ್ತು ವಾಸನೆ ಗ್ರಹಿಕೆ ಇಲ್ಲದಿರುವುದನ್ನು ಕೂಡ ಸೇರಿಸಲಾಗಿದೆ.
ಕೆಮ್ಮು, ಉಸಿರಾಟದ ತೊಂದರೆ, ಕೊರೋನಾ ಸ್ನಾಯುಗಳಲ್ಲಿ ನೋವು, ಗಂಟಲು ನೋವು, ಶೀತ, ಅತಿಸಾರ, ಜ್ವರ ಕೊರೋನಾ ಲಕ್ಷಣಗಳಾಗಿವೆ.