ಕೊರೊನಾ ವೈರಸ್ ನ ಎರಡನೇ ಅಲೆ ಹೆಚ್ಚು ಅಪಾಯಕಾರಿಯಾಗಿದೆ. ಮೊದಲ ಅಲೆಯಲ್ಲಿ ವೃದ್ಧರು ಹೆಚ್ಚು ಸೋಂಕಿಗೊಳಗಾಗ್ತಿದ್ದರು. ಎರಡನೇ ಅಲೆಯಲ್ಲಿ ಕಿರಿಯರು ಹೆಚ್ಚು ಸೋಂಕಿಗೊಳಗಾಗ್ತಿದ್ದಾರೆ. ಮಹಿಳೆಯರ ಸಂಖ್ಯೆಯೂ ಹೆಚ್ಚಿದೆ ಎಂದು ತಜ್ಞರು ಹೇಳಿದ್ದಾರೆ.
ಹೈದರಾಬಾದ್ನ ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ಎರಡನೇ ಅಲೆಯಲ್ಲಿ ಒಟ್ಟು ಸೋಂಕಿತ ರೋಗಿಗಳಲ್ಲಿ ಶೇಕಡಾ 38.5 ರಷ್ಟು ಮಹಿಳೆಯರು ಸೋಂಕಿಗೊಳಗಾಗಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ಇದು ಕೇವಲ ಶೇಕಡಾ 34 ರಷ್ಟಿತ್ತು. ಒಟ್ಟು ಸೋಂಕಿತರಲ್ಲಿ ಶೇಕಡಾ 64.6 ರಷ್ಟು ಪುರುಷರಿದ್ದಾರೆ.
ಮಹಿಳೆಯರಲ್ಲಿ ಸೋಂಕು ಹೆಚ್ಚಾಗಲು ಕಾರಣವೇನು ಎಂಬುದನ್ನು ತಜ್ಞರು ಹೇಳಿದ್ದಾರೆ. ವೈರಸ್ ರೂಪಾಂತರವೇ ಮಹಿಳೆಯರು ಹೆಚ್ಚು ಸೋಂಕಿಗೆ ಒಳಗಾಗಲು ಕಾರಣವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮಹಿಳೆಯರಲ್ಲದೆ, ಸಣ್ಣ ವಯಸ್ಸಿನವರಿಗೆ ಕೊರೊನಾ ಕಾಣಿಸಿಕೊಳ್ತಿದೆ. ಮೂರನೇ ಅಲೆಯಲ್ಲೂ ಮಕ್ಕಳ ಜೊತೆ ಮಹಿಳೆಯರಿಗೆ ಅಪಾಯ ಹೆಚ್ಚು ಎನ್ನಲಾಗಿದೆ.
ಬ್ರೆಜಿಲ್ ನಲ್ಲಿಯೂ ಈ ಬಾರಿ ಹೊಸ ವೈರಸ್ ಮಹಿಳೆಯರಿಗೆ ಅಪಾಯಕಾರಿಯಾಗಿದೆ. ಗರ್ಭಿಣಿಯರಿಗೆ ಹೆಚ್ಚು ಆಮ್ಲಜನಕದ ಕೊರತೆ ಕಾಡ್ತಿದೆ. ಹೆರಿಗೆ ಮೊದಲು ಹಾಗೂ ನಂತ್ರ ಆಮ್ಲಜನಕದ ಕೊರತೆ ಕಾಡ್ತಿದೆ. ಬ್ರೆಜಿಲ್ ನಲ್ಲಿ ಹೆಚ್ಚು ಗರ್ಭಿಣಿಯರು ಸಾವನ್ನಪ್ಪುತ್ತಿದ್ದಾರೆ.