ಭಾರತದಲ್ಲಿ ಕೋವಿಡ್ -19 ರ ಮಾರಣಾಂತಿಕತೆ ದರವು ಮೊದಲ ಬಾರಿಗೆ ಶೇಕಡಾ 2.5 ಕ್ಕಿಂತ ಕಡಿಮೆಯಾಗಿದೆ. ಆರೋಗ್ಯ ಸಚಿವಾಲಯದ ಪ್ರಕಾರ, ಭಾರತವು ವಿಶ್ವದ ಅತಿ ಕಡಿಮೆ ಸಾವಿನ ದೇಶಗಳಲ್ಲಿ ಒಂದಾಗಿದೆ. ಭಾರತದ 29 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾವಿನ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ (2.49%) ಕಡಿಮೆಯಾಗಿದೆ.
ಕೋವಿಡ್ -19 ರ ಕಾರಣದಿಂದಾಗಿ ಐದು ರಾಜ್ಯಗಳಲ್ಲಿ ಒಂದೇ ಒಂದು ಸಾವು ದಾಖಲಾಗಿಲ್ಲ. 14 ರಾಜ್ಯಗಳಲ್ಲಿ ಮಾರಣಾಂತಿಕತೆ ದರ ಶೇಕಡಾ 1 ಕ್ಕಿಂತ ಕಡಿಮೆಯಿದೆ. ಜೂನ್ 2 ರ ಹೊತ್ತಿಗೆ, ಭಾರತದಲ್ಲಿ ಕೋವಿಡ್ -19 ರ ಮಾರಣಾಂತಿಕತೆ ದರ ಶೇಕಡಾ 2.82 ಆಗಿತ್ತು. ಜುಲೈ 10 ರಂದು ಇದು ಶೇಕಡಾ 2.72 ಕ್ಕೆ ಇಳಿದಿದೆ.
ಯೆಮೆನ್, ಬೆಲ್ಜಿಯಂ ಮತ್ತು ಯುನೈಟೆಡ್ ಕಿಂಗ್‌ಡಮ್ ವಿಶ್ವದಲ್ಲೇ ಅತಿ ಹೆಚ್ಚು ಸಾವಿನ ಪ್ರಮಾಣವನ್ನು ಹೊಂದಿವೆ. ಭಾರತದ ಐದು ರಾಜ್ಯಗಳಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಆ ಪಟ್ಟಿಯಲ್ಲಿ ಈಶಾನ್ಯದ ಮಣಿಪುರ, ನಾಗಾಲ್ಯಾಂಡ್, ಸಿಕ್ಕಿಂ, ಮಿಜೋರಾಮ್, ಅಂಡಮಾನ್ ನಲ್ಲಿ ಕೊರೊನಾ ಪ್ರಕರಣ ಕಡಿಮೆಯಿದ್ದು, ಸಾವು ಸಂಭವಿಸಿಲ್ಲ. ಇದು ನೆಮ್ಮದಿ ಸುದ್ದಿಯಾಗಿದೆ.