ಕೊರೊನಾ ವೈರಸ್ ದೇಶದ ಚಿತ್ರಣವನ್ನು ಬದಲಿಸಿದೆ. ಕೊರೊನಾ, ಲಾಕ್ ಡೌನ್ ನಿಂದಾಗಿ ಜನರು ಸಂಕಷ್ಟದಲ್ಲಿದ್ದಾರೆ. ಆಸ್ಪತ್ರೆ, ಬೆಡ್ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಅನೇಕರು ಜನ ಸೇವೆಗೆ ನಿಂತ್ರೆ ಮತ್ತೆ ಕೆಲವರು ಹಣ ಮಾಡುವುದ್ರಲ್ಲಿ, ಜನರಿಗೆ ಮೋಸ ಮಾಡುವುದರಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ವ್ಯಕ್ತಿಯೊಬ್ಬನ ಹೇಸಿಗೆ ಕೆಲಸ ಬೆಳಕಿಗೆ ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಷ್ಯವನ್ನು ಹಂಚಿಕೊಳ್ಳಲಾಗಿದೆ. ಭ್ರಾವಿನ್ ಕಂಧಾರಿ ಎಂಬ ವ್ಯಕ್ತಿ ಟ್ವಿಟ್ ಮಾಡಿದ್ದಾರೆ. ಸ್ನೇಹಿತನ ಸಹೋದರಿ ತಂದೆಗೆ ಆಕ್ಸಿಜನ್ ಸಿಲಿಂಡರ್ ಅವಶ್ಯಕತೆಯಿತ್ತು. ಈ ಸಂದರ್ಭದಲ್ಲಿ ಹುಡುಗಿ ನೆರವಿಗೆ ಬಂದ ವ್ಯಕ್ತಿಯೊಬ್ಬ ಸಿಲಿಂಡರ್ ನೀಡಿದ್ರೆ ಹಾಸಿಗೆ ಹಂಚಿಕೊಳ್ಳಬೇಕೆಂದು ಷರತ್ತು ವಿಧಿಸಿದ್ದಾನೆ ಎಂದು ಕಂಧಾರಿ ಬರೆದಿದ್ದಾರೆ. ಈತನ ವಿರುದ್ಧ ದೂರು ನೀಡಲು ಯಾವುದೇ ಸಾಕ್ಷಿಯಿಲ್ಲವೆಂದು ಕಂಧಾರಿ ಹೇಳಿದ್ದಾರೆ.
ಕಂಧಾರಿ, ಟ್ವಿಟ್ ಗೆ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ. ಆರೋಪಿ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಜನರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಹುಡುಗಿಯೊಬ್ಬಳು, ಸಿಲಿಂಡರ್ ಗಾಗಿ ಸಹಾಯವಾಣಿ ನಂಬರ್ ಗೆ ಕರೆ ಮಾಡಿದಾಗ, ಮೇಡಂ ನಾವು ಹುಡುಗಿಯನ್ನು ಮಾತ್ರ ಒದಗಿಸುತ್ತೇವೆ. ಸಿಲಿಂಡರ್ ಅಲ್ಲ ಎಂಬ ಉತ್ತರ ಬಂದಿದೆ ಎಂದು ಬರೆದಿದ್ದಾಳೆ.