ಇಡೀ ಜಗತ್ತಿನಲ್ಲಿ ಕೊರೊನಾದಿಂದ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗುತ್ತಿದ್ದಾರೆ. ಆದರೆ, ಭಾರತದಲ್ಲಿ ಮಾತ್ರ ಹಾಗಿಲ್ಲ.
ಪ್ರಪಂಚದ ಎಲ್ಲ ದೇಶಗಳಲ್ಲಿ ಕೊರೊನಾದಿಂದ ಬಲಿಯಾಗುತ್ತಿರುವವರು ಹೆಂಗಸರೋ ಅಥವಾ ಗಂಡಸರೋ, ಯಾವ ವಯಸ್ಸಿನವರು ಹೆಚ್ಚು ಸಾಯುತ್ತಿದ್ದಾರೆ ಎಂಬ ಅಧ್ಯಯನವೊಂದು ನಡೆದಿದೆ.
ಅಮೆರಿಕ, ಇಟಲಿ, ಚೀನಾ, ಜರ್ಮನಿ, ಸ್ಪೇನ್, ಇರಾನ್, ಭಾರತ, ಪಾಕಿಸ್ತಾನ ಸೇರಿದಂತೆ 20 ದೇಶಗಳ ಅಂಕಿ-ಅಂಶಗಳ ಆಧಾರದ ಮೇಲೆ ಅಧ್ಯಯನ ನಡೆದಿದ್ದು, ಜರ್ನಲ್ ಅಫ್ ಗ್ಲೋಬಲ್ ಹೆಲ್ತ್ ಸೈನ್ಸ್ ಅಲ್ಲಿ ಅಧ್ಯಯನ ವರದಿ ಪ್ರಕಟಗೊಂಡಿದೆ.
ಅದರ ಪ್ರಕಾರ ಶೇ.2.9 ರಷ್ಟು ಪುರುಷರು ಕೊರೊನಾದಿಂದ ಸಾವನ್ನಪ್ಪಿದ್ದರೆ, ಶೇ.3.3 ರಷ್ಟು ಮಹಿಳೆಯರು ಭಾರತದಲ್ಲಿ ಸಾವಿಗೀಡಾಗಿದ್ದಾರೆ.