ಕೊರೊನಾ ವೈರಸ್ ಕಾರಣದಿಂದಾಗಿ ಟಿಬಿ ರೋಗಿಗಳ ಪತ್ತೆ ಕಾರ್ಯ ಕಷ್ಟವಾಗಿದೆ. ಜನರು ಪರೀಕ್ಷೆ ಮಾಡಿಸಲು ಹೆದರುತ್ತಿದ್ದಾರೆ ಎಂದು ಕ್ಷಯರೋಗ ನಿಯಂತ್ರಣ ಇಲಾಖೆ ತಿಳಿಸಿದೆ.
ಕೊರೊನಾ ಸೋಂಕು, ಟಿಬಿ ರೋಗಿಗಳಿಗೆ ಅಪಾಯಕಾರಿ ಎಂದು ವೈದ್ಯರು ಹೇಳಿದ್ದಾರೆ. ಕ್ಷಯರೋಗದಿಂದಾಗಿ ರೋಗಿಯ ಶ್ವಾಸಕೋಶವು ಈಗಾಗಲೇ ದುರ್ಬಲವಾಗಿರುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆಯಿರುತ್ತದೆ. ಇವರಿಗೆ ಕೊರೊನಾ ಪಾಸಿಟಿವ್ ಬಂದಲ್ಲಿ ಚಿಕಿತ್ಸೆ ಕಷ್ಟವಾಗುತ್ತದೆ.
ಆರೋಗ್ಯ ಇಲಾಖೆಯ ಅಧ್ಯಯನದ ಪ್ರಕಾರ, ಜನರು ಕೊರೊನಾಕ್ಕೆ ಹೆದರಿ ಆಸ್ಪತ್ರೆಗೆ ಹೋಗ್ತಿಲ್ಲ. ನಾಲ್ಕೈದು ದಿನ ಜ್ವರವಿದ್ದರೆ ಅವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆದರೆ 15-20 ದಿನಗಳಿಗಿಂತ ಹೆಚ್ಚು ಕಾಲ ಕೆಮ್ಮಿದ್ದು, ದೇಹದ ತೂಕ ಕಡಿಮೆಯಾಗುತ್ತಿದ್ದರೆ ಟಿಬಿ ತಪಾಸಣೆ ಮಾಡಬೇಕು. ಟಿಬಿ ಇರುವುದು ಸಾಬೀತಾದ್ರೆ ಆರು ತಿಂಗಳಿಂದ ಒಂದೂವರೆ ವರ್ಷ ನಿರಂತರವಾಗಿ ಔಷಧಿ ಸೇವಿಸಬೇಕಾಗುತ್ತದೆ.
ಉತ್ತರಾಖಂಡದಲ್ಲಿ ಈಗಾಗಲೇ ಟಿಬಿ ಮಾತ್ರೆ ಸೇವನೆ ಮಾಡ್ತಿರುವ ರೋಗಿಗಳಿಗೆ ಮನೆಗೆ ಔಷಧಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಟಿಬಿ ಬಗ್ಗೆ ಗೊಂದಲವಿದ್ದರೆ 104 ಗೆ ಕರೆ ಮಾಡಿದ್ರೆ, ರೋಗಿಗಳಿಗೆ ಮುಂದೇನು ಮಾಡಬೇಕೆಂಬ ಬಗ್ಗೆ ಸಲಹೆ ನೀಡಲಾಗುವುದು ಎಂದು ಅಲ್ಲಿನ ಸರ್ಕಾರ ಹೇಳಿದೆ.